ಮುಲ್ಕಿ: ಮುಲ್ಕಿ ಸಮೀಪದ ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಅಷ್ಟಾವಧಾನ ಸೇವೆಯು ಜೂ 3ರಿಂದ 10ವರೆಗೆ ನಡೆಯಲಿದ್ದು ಜೂ.5ರಂದು ಸುರೇಶ್ ಸೇರಿಗಾರ್ ಪೊರ್ಕೋಡಿ ಮತ್ತು ತಂಡದವರಿಂದ ಸಾಕ್ಸೊಫೋನ್ ವಾದನ ನಡೆಯಿತು.
ಮಂದಿರದ ಅರ್ಚಕ ರಾಘವೇಂದ್ರ ರಾವ್ ಕೆರೆ ಕಾಡು, ಮಾಧವ ಶೆಟ್ಟಿಗಾರ್, ಸಂದೀಪ್ ಕೋಟ್ಯಾನ್, ಸುರೇಂದ್ರ ಶೆಟ್ಟಿಗಾರ್, ವಸಂತ ಶೆಟ್ಟಿಗಾರ್, ರಾಜೇಶ್ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು. ಜೂ.7ರಂದು ಕೆರೆಕಾಡು ಶ್ರೀ ವಿನಾಯಕ ಯಕ್ಷ ಕಲಾ ಫೌಂಡೇಶನ್ ವತಿಯಿಂದ ತಾಳಮದ್ದಲೆ ಕಾರ್ಯಕ್ರಮ, ಜೂ.10ರಂದು ತಾಳಿಪಾಡಿ ಶ್ರೀ ಶನಿಕಥಾ ಸಂಕೀರ್ತನಾ ಮಂಡಳಿ ವತಿಯಿಂದ ಶನಿ ಕಥೆ ನಡೆಯಲಿದೆ.
Kshetra Samachara
06/07/2022 10:09 am