ಕಟೀಲು:ಬ್ರಾಹ್ಮಣ್ಯ ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಸಂಘಟನೆಯೊಂದಿಗೆ ಧರ್ಮಾಚರಣೆ, ಸಂಸ್ಕಾರದ ಉಳಿವಿನ ಜೊತೆಗೆ ಸಮಾಜಮುಖಿ ಕಾರ್ಯಗಳೊಂದಿಗೆ ಸರ್ವೇ ಜನಾಃ ಸುಖಿನೋ ಭವಂತು ಎಂಬಂತೆ ಮುನ್ನಡೆಯೋಣ ಎಂದು ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಅವರು ದೇಲಂತಬೆಟ್ಟು ಕೈಯೂರು ರಾಘವೇಂದ್ರ ಮಠದಲ್ಲಿ ಶಿವಳ್ಳಿ ಸ್ಪಂದನ ಕಟೀಲು ವಲಯದ ನೂತನ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಇದೇ ಸಂದರ್ಭ ಸಾಹಿತ್ಯ ಪರಿಷತ್ ಮುಲ್ಕಿ ತಾಲೂಕು ಘಟಕದ ಅಧ್ಯಕ್ಷೆ ಗಾಯತ್ರೀ ಎಸ್. ಉಡುಪರನ್ನು ಗೌರವಿಸಲಾಯಿತು .
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದವರನ್ಬು ಅಭಿನಂದಿಸಲಾಯಿತು. ವಿವಿಧ ಕ್ರೀಡಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಾಧವ ಆಚಾರ್ಯ, ಲಕ್ಷ್ಮೀನಾರಾಯಣ ಆಚಾರ್ಯ,ಸುಧಾ ಆಚಾರ್ಯ, ಹಯವದನ ಭಟ್, ಪ್ರದೀಪ ಭಟ್ ಬಾಳ, ಲಕ್ಷ್ಮೀನಾರಾಯಣ ರಾವ್, ರಮೇಶ್ ಭಟ್ ನೇಜಾರು, ಶ್ರೀನಿವಾಸ ಭಟ್ ಮತ್ತಿತರರಿದ್ದರು.
ಶಿವಳ್ಳಿ ಸ್ಪಂದನ ಅಧ್ಯಕ್ಷ ಅನಂತಪದ್ಮನಾಭ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಗುರುರಾಜ ಭಟ್ ವಂದಿಸಿದರು. ರಮೇಶ್ ಭಟ್ ವೈಶಾಲಿ, ಸುರೇಶ್ ರಾಜ್ ಭಟ್ ನಿರೂಪಿಸಿದರು.
Kshetra Samachara
03/07/2022 07:01 pm