ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ರೋಟರಿ ಕ್ಲಬ್ ಸಾಮಾಜಿಕ ಕಾರ್ಯ ಅಭಿನಂದನೀಯ; ಉಮಾನಾಥ್

ಮುಲ್ಕಿ:ಮುಲ್ಕಿ ರೋಟರಿ ಕ್ಲಬ್ ನ ರಜತ ಮಹೋತ್ಸವದ ಸಂಭ್ರಮದ ಅಂಗವಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರು ದಾನಿಗಳ ನೆರವಿನಿಂದ ನಿರ್ಮಾಣವಾದ ಜಯ ಸಿ. ಸುವರ್ಣ ಸ್ಮಾರಕ ರೋಟರಿ ಚಿಲ್ಡ್ರನ್ ಪಾರ್ಕ್ ನ ಉದ್ಘಾಟನೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ನೆರವೇರಿಸಿದರು.

ಈ ಸಂದರ್ಭ ಅವರು ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಮುಲ್ಕಿ ರೋಟರಿ ಕ್ಲಬ್ ಉತ್ತಮ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಾ ಬರುತ್ತಿರುವುದು ಅಭಿನಂದನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ್ ಜೆ ಅಮೀನ್ ವಹಿಸಿದ್ದರು. ಈ ಸಂದರ್ಭ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಚಿಲ್ಡ್ರನ್ ಪಾರ್ಕ್ ಪ್ರಾಯೋಜಕ ಸೂರ್ಯಕಾಂತ ಜೆ ಸುವರ್ಣ, ತುಳು ಚಿತ್ರನಟ ಭೋಜರಾಜ ವಾಮಂಜೂರು, ಮುಲ್ಕಿ ರೋಟರಿ ಕ್ಲಬ್ ಪದಾಧಿಕಾರಿಗಳಾದ ಅಶೋಕ್ ಕುಮಾರ್ ಶೆಟ್ಟಿ, ವೈ ಎನ್ ಸಾಲ್ಯಾನ್, ರವಿಚಂದ್ರ , ಜಿನರಾಜ್ ಸಿ ಸಾಲ್ಯಾನ್, ರೋ. ನಾರಾಯಣ, ರಾಜಾ ಪತ್ರಾವೋ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

27/06/2022 05:44 pm

Cinque Terre

4.08 K

Cinque Terre

0