ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅದಿತಿ ಗ್ಯಾಲರಿಯಲ್ಲಿ ಜೂ.17 ರಿಂದ ಮೂರು ದಿನ 50 ದೇಶಗಳ ಮುಖವಾಡಗಳ ಪ್ರದರ್ಶನ

ಉಡುಪಿ :ವಿಶ್ವದ ಸುಮಾರು ಐವತ್ತು ದೇಶಗಳ ನೂರೈವತ್ತಕ್ಕೂ ಅಧಿಕ ಜಾನಪದ ಮುಖವಾಡಗಳ ಪ್ರದರ್ಶನವನ್ನು ಉಡುಪಿ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜೂ . 17 ರಿಂದ ಮೂರುದಿನಗಳ ಕಾಲ ಆಯೋಜಿಸಲಾಗಿದೆ.

ಮುಖವಾಡಗಳು ಕೇವಲ ಚಹರೆಗಳ ಮರೆಮಾಚಲು ,ಅಲಂಕಾರಕ್ಕಲ್ಲದೆ ಅರೋಗ್ಯ ವೃದ್ಧಿಸಲು , ಶತ್ರುಬಾಧೆಯನ್ನು ನಿವಾರಿಸಲು ಬಳಸಲಾಗುತಿತ್ತು . ಅನೇಕ ಯುದ್ಧಗಳಲ್ಲಿ ಶತ್ರುವಿನ ದಾಳಿಯನ್ನು ತಡೆಯಲು ಉಪಯೋಗಿಸಲಾಗುತ್ತಿತ್ತು . ಇಂತಹ ಕೆಲವು ಮುಖವಾಡಗಳನ್ನ ಉಡುಪಿ ಭಾಗದ ಕಲಾಸಕ್ತರಿಗೂ ಪರಿಚಯಿಸುವ ದೃಷ್ಟಿಯಿಂದ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಮುಖವಾಡ ಸಂಗ್ರಹಕಾರರೂ , ಅದಿತಿ ಗ್ಯಾಲರಿಯ ಆಡಳಿತ ವಿಶ್ವಸ್ಥರೂ ಆಗಿರುವ ಡಾ | ಕಿರಣ್ ಆಚಾರ್ಯ ಮಾಹಿತಿ ನೀಡಿದರು.

ದಕ್ಷಿಣ ಅಮೇರಿಕ, ಇಟಲಿ , ಶ್ರೀಲಂಕಾ , ಬರ್ಮಾ , ನೇಪಾಳ , ಆಫ್ರಿಕಾ ಮುಂತಾದ ದೇಶಗಳ ಸುಮಾರು ನೂರೈವತ್ತಕ್ಕೂ ಅಧಿಕ ಮುಖವಾಡಗಳನ್ನು ಕಲಾ ಪೂರ್ಣವಾಗಿ ಜೋಡಿಸಿ ಇಡಲಾಗಿದೆ. ಅಧ್ಯಯನ ಆಸಕ್ತರಿಗಾಗಿ ಮುಖವಾಡದ ಸಂಕ್ಷಿಪ್ತ ವಿವರಣೆಯನ್ನೂ ಬರೆದಿಡಲಾಗಿದೆ ಎಂದೂ ಅವರು ವಿವರಿಸಿದರು.

ಜೂ 16 ರಂದು ಸಂಜೆ 5 15 ಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಉದ್ಘಾಟಿಸಲಿದ್ದಾರೆ . ಯೂನಿಯನ್ ಬ್ಯಾಂಕಿನ ಡಿ ಜಿ ಎಮ್ ಡಾ | ಎಚ್ ಟಿ ಎಂ ವಾಸಪ್ಪ , ಮುಂಬೈಯ ಕಲೋಪಾಸಕ ಅರವಿಂದ ವ್ಯಾಸರಾಯ ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜೂ 17 ರಿಂದ ಜೂ . 19 ರವರೆಗೆ ಬೆಳಗ್ಗೆ 10 ರಿಂದ ಸಂಜೆ 8 ರವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

13/06/2022 06:09 pm

Cinque Terre

3.09 K

Cinque Terre

0

ಸಂಬಂಧಿತ ಸುದ್ದಿ