ಮುಲ್ಕಿ:ಮುಲ್ಕಿ ಯ ಖ್ಯಾತ ನಾಗಸ್ವರ ವಾದಕ ನಾಗೇಶ್ ಬಪ್ಪನಾಡು ರವರಿಗೆ ಚೆನ್ನೈನ ಪ್ರತಿಷ್ಠಿತ 'ಮುತಮಿಳ್ ಪೆರವಯ್ ಫೌಂಡೇಶನ್' ವತಿಯಿಂದ ನೀಡಲಾಗುವ 'ನಾದಸ್ವರ ಸೆಲ್ವಂ' ವಾರ್ಷಿಕ ಪ್ರಶಸ್ತಿ ನೀಡಲಾಗಿದೆ.ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ರವರು ಪ್ರಶಸ್ತಿಯನ್ನು ಚೆನ್ನೈನಲ್ಲಿ ನಡೆಯುವ ಸಮಾರಂಭದಲ್ಲಿ ಜೂ.6ರಂದು ಪ್ರದಾನ ಮಾಡಿದರು.
ಈ ಸಂದರ್ಭ ಮುಖ್ಯಮಂತ್ರಿ ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತಿತರರು ಉಪಸ್ಥಿತರಿದ್ದರು.ಪ್ರಶಸ್ತಿ ಪಡೆದ ನಾಗೇಶ್ ಬಪ್ಪನಾಡು ರವರನ್ನು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು,ಮಾಜೀ ಸಚಿವ ಅಭಯಚಂದ್ರ ಜೈನ್, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮತ್ತಿತರರು ಅಭಿನಂದಿಸಿದ್ದಾರೆ.
Kshetra Samachara
06/06/2022 10:40 pm