ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ಕನ್ನಡಕ್ಕೆ ಕೊ.ಅ. ಉಡುಪರ ಸೇವೆ ಅನನ್ಯ - ಪಾಂಡುರಂಗ ಭಟ್

ಕಟೀಲು : ಸ್ವತಃ ಸಾಹಿತಿಯಾಗಿ, ಅನೇಕ ಸಾಹಿತಿಗಳನ್ನು ರೂಪಿಸಿದ, ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆಗಳನ್ನು ಕೊಟ್ಟ, ಯುಗಪುರುಷ ಪತ್ರಿಕೆ, ಪ್ರಕಾಶನಗಳನ್ನು ರೂಪಿಸಿದ ಕೊಡೆತ್ತೂರು ಅನಂತಪದ್ಮನಾಭ ಉಡುಪರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅನನ್ಯವಾದುದು ಎಂದು ಕಟೀಲು ಪಾಂಡುರಂಗ ಭಟ್ ಹೇಳಿದರು.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮುಲ್ಕಿ ತಾಲೂಕು ಘಟಕ ಆಯೋಜಿಸಿದ ಎಳತ್ತೂರು ಗೋಪಾಲಕೃಷ್ಣ ದತ್ತಿ ಉಪನ್ಯಾಸ ಕಾರ‍್ಯಕ್ರಮದಲ್ಲಿ ಕೊಡೆತ್ತೂರು ಅನಂತಪದ್ಮನಾಭ ಉಡುಪರ ಕೃತಿಗಳ ಕುರಿತು ಮಾತನಾಡಿದರು.

ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿಗಳ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದ ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಸರಕಾರದಿಂದ ಶಿಕ್ಷಕರ ನೇಮಕಾತಿಯಾಗದೆ ಕನ್ನಡ ಶಾಲೆಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಕನ್ನಡ ಸಾಹಿತ್ಯದ ಓದು ವಿದ್ಯಾರ್ಥಿಗಳ ಉತ್ತಮ ಬದುಕಿಗೆ ಪ್ರೇರಣೆ ನೀಡುತ್ತದೆ ಎಂದರು.

ಪ್ರಬಂಧ ಸ್ಪರ್ಧೆ ವಿಜೇತರಾದ ರಂಜನಾ ಭಟ್, ದುರ್ಗಾಶ್ರೀ, ಸುಶ್ಮಿತಾ ಹಾಗೂ ಸಿಂಚನಾ ಇವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸಾಹಿತ್ಯ ಪರಿಷತ್ ಮೂಲ್ಕಿ ಘಟಕ ಅಧ್ಯಕ್ಷೆ ಗಾಯತ್ರೀ ಎಸ್. ಉಡುಪ ಕಟೀಲು ಪದವಿ ಕಾಲೇಜಿನ ವಾರ್ಷಿಕಾಂಕ ಇಂಚರವನ್ನು ಬಿಡುಗಡೆಗೊಳಿಸಿದರು. ಪ್ರಾಚಾರ‍್ಯ ಡಾ. ಕೃಷ್ಣ, ಸಾಹಿತ್ಯ ಪರಿಷತ್ ಸದಸ್ಯೆ ಡಾ. ಎಚ್. ಬಿ. ಸುನೀತಾ ಉಪಸ್ಥಿತರಿದ್ದರು. ಉಪನ್ಯಾಸಕ ಸಂತೋಷ್ ಆಳ್ವ ನಿರೂಪಿಸಿದರು. 

Edited By : PublicNext Desk
Kshetra Samachara

Kshetra Samachara

30/05/2022 07:14 pm

Cinque Terre

1.57 K

Cinque Terre

0

ಸಂಬಂಧಿತ ಸುದ್ದಿ