ಮುಲ್ಕಿ: ಜೆಸಿಐ ಮುಲ್ಕಿ ಶಾಂಭವಿ ವತಿಯಿಂದ ಎಸ್‌ಎಸ್‌ಎಲ್‌ಸಿ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ಬಪ್ಪನಾಡು ಮಾತಾ ಪಂಚ ದುರ್ಗಾ ರೆಸಿಡೆನ್ಸಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಜೆಸಿಐ ಅಧ್ಯಕ್ಷ ಕಲ್ಲಪ್ಪ ತಡವಲಗ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಿನೇಶ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ವೆಂಕಟೇಶ ಹೆಬ್ಬಾರ್,ಕಾರ್ಯದರ್ಶಿ ವಿಶ್ವನಾಥ್ ಶೆಣೈ, ಆಶ್ರಯ ಸುವರ್ಣ, ಯಶ ಡಿ.ಶೆಟ್ಟಿ, ನೋಣಯ್ಯ ರೆಂಜಾಳ,ಶಶಿಧರ್ ವಿ ಕಾಮತ್, ನಂದಿತಾ ಕಾಮತ್, ವೇದಾನಂದ ಶೆಟ್ಟಿ ವೀಣಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 2021-22ರ ಎಸ್‌ಎಸ್‌ಎಲ್‌ಸಿ ಟಾಪರ್ 625/625 ಗಳಿಸಿ ಸಾಧನೆ ಮಾಡಿದ ವಿ ಅಕ್ಷತಾ ಕಾಮತ್, ವೀಕ್ಷಾ ವಿ ಶೆಟ್ಟಿ ರವರನ್ನು ಗೌರವಿಸಲಾಯಿತು.
Kshetra Samachara
22/05/2022 03:58 pm