ಉಡುಪಿ: ಕ್ರಿಕೆಟ್ ಪಂದ್ಯಾಟ ಕೇವಲ ಕ್ರೀಡೆ, ಮನೋರಂಜನೆಗೆ ಸೀಮಿತವಾಗಿಲ್ಲ.ಬದಲಾಗಿ ಅದು ಅದೆಷ್ಟೋ ಬಡ ಕುಟುಂಬಕ್ಕೆ ಆಧಾರ ಸ್ಥಂಭ ಆಗಬಹುದು ಅನ್ನೋದನ್ನು ಸಮ್ಮಿಲನ ಫ್ರೆಂಡ್ಸ್ ತೋರಿಸಿಕೊಟ್ಟಿದೆ.ಉಡುಪಿಯ ಹುಂಡೈ, ಆಭರಣ ಮೋಟರ್ಸ್, ಅರವಿಂದ್ ಮೋಟರ್ಸ್, ಸಾಯಿರಾಧಾ ಮೋಟರ್ಸ್ ಸೇರಿದಂತೆ ವಿವಿಧ ಆಟೋಮೊಬೈಲ್ ಸಂಸ್ಥೆಗಳು, ಬ್ಯಾಂಕಿಂಗ್ ಕ್ಷೇತ್ರದ ಸಿಬ್ಬಂದಿಗಳು ಸೇರಿ ಸಮ್ಮಿಲನ ಫ್ರೆಂಡ್ಸ್ ಎನ್ನುವ ತಂಡ ಕಟ್ಟಿ ಕ್ರಿಕೆಟ್ ಪಂದ್ಯಾಟ ಆಯೋಜಿಸಿತ್ತು.
20 ತಂಡಗಳು ಮಹಾತ್ಮಾಗಾಂಧಿ ಹಾಗೂ ಬೀಡಿನಗುಡ್ಡೆ ಮೈದಾನದಲ್ಲಿ ಕ್ರಿಕೆಟ್ ಆಡುವ ಮೂಲಕ ಕ್ರಿಕೆಟ್ ಪಂಧ್ಯ ನಡೆಸಿ ವಿಜೇತ ತಂಡಗಳಿಗೆ ಟ್ರೋಫಿ ನಗದು ಬಹುಮಾನ ನೀಡುವ ಜೊತೆಗೆ ಅಶಕ್ತ ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ ಆಟೋಮೊಬೈಲ್ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಸಿಬ್ಬಂದಿಗಳು. ಒಂದು ಕುಟುಂಬಕ್ಕೆ ವೀಲ್ ಚೇರ್ ಹಾಗೂ ಅನಾರೋಗ್ಯದಿಂದ ಚಿಕಿತ್ಸೆ ಪಡೆಯಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ನಾಲ್ಕು ಕುಟುಂಬಕ್ಕೆ ಧನಸಹಾಯ ಜೊತೆಗೆ ಇಬ್ಬರು ಸಾಧಕರಿಗೆ ಸನ್ಮಾನ ಮಾಡುವ ಮೂಲಕ ಆರ್ಥಿಕ ಸ್ಥೈರ್ಯ ತುಂಬುವ ಕಾರ್ಯ ನಡೆಯಿತು. ಇನ್ನು ಸಮ್ಮಿಲನ ಟ್ರೋಫಿ ಕ್ರಿಕೆಟ್ ಪಂಧ್ಯಾಟದಲ್ಲಿ ಆಭರಣ ಮೋಟರ್ಸ್ ವಿನ್ನರ್ ಆಗಿ ಹೊರಹೊಮ್ಮಿದ್ರೆ ಅರವಿಂದ್ ಮೋಟರ್ಸ್ ರನ್ನರ್ ಹಾಗೂ ಸಾಯಿರಾಧಾ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.
ಮೀನುಗಾರಿಕಾ ಫೆಡರೇಶನ್ ಅಧ್ಯಕ್ಚ ಯಶ್ಪಾಲ್ ಸುವರ್ಣ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರೀಜಿಯನಲ್ ಮ್ಯಾನೇಜರ್ ಸುನಿಲ್ ಪರಾಂಜಪೆ, ಮಾರ್ನಿಂಗ್ ಸ್ಟಾರ್ ಸಂಸ್ಥೆಯ ರವೀಂದ್ರ ಶೇಟ್, ತನಾಗ್ರ ಎಂಟರ್ ಪ್ರೈಸ್ ನ ದಿಲೇಶ್ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಅಶಕ್ತಕರಿಗೆ ಸಹಾಯಧನ ಹಸ್ತಾಂತರಿಸಿದ್ರು.
Kshetra Samachara
19/05/2022 09:16 pm