ಮುಲ್ಕಿ: ಪುನರೂರು ಪ್ರತಿಷ್ಠಾನ(ರಿ) ನ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮುಲ್ಕಿ ಸಹಕಾರದಲ್ಲಿ ಮೇ 8 ರ ಆದಿತ್ಯವಾರದಿಂದ ಮೇ 15 ರ ಆದಿತ್ಯವಾರದವರೆಗೆ ಪುನರೂರು ಶ್ರೀ ವಿಶ್ವನಾಥ ದೇವಸ್ತಾನದ ಸಭಾಂಗಣದಲ್ಲಿ ಮಕ್ಕಳ ಬೌದ್ದಿಕ ಬೆಳವಣಿಗೆಗಾಗಿ ಉಚಿತ ಬೇಸಿಗೆ ಶಿಬಿರ ಬಾಲ ವಿಕಾಸ ಶಿಬಿರ-2022 ದ ಸಮಾರೋಪ ಸಮಾರಂಭ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪುನರೂರು ಪ್ರತಿಷ್ಥಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ವಹಿಸಿದ್ದರು. ಭರತನಾಟ್ಯ, ಸಂಗೀತ, ಯಕ್ಷಗಾನ ಕಲಾವಿದೆ ದೀಪ್ತಿ ಭಟ್ ಸಮಾರೋಪ ಭಾಷಣ ಮಾಡಿ ಮಕ್ಕಳು ಶಿಬಿರದಲ್ಲಿ ಕಲಿತ ಶಿಕ್ಷಣವನ್ನು ಮುಂದುವರಿಸಿ ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಎಂಆರ್ ಪಿಎಲ್ ನ ಪ್ರಧಾನ ವ್ಯವಸ್ತಾಪಕಿ ವೀಣಾ ವಿ ಶೆಟ್ಟಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ,10ನೇ ತೋಕೂರು ಫೇಮಸ್ ಯೂತ್ ಕ್ಲಬ್ ನ ಅಧ್ಯಕ್ಷ ಭಾಸ್ಕರ ಅಮೀನ್ ತೋಕೂರು,ಪುನರೂರು ವಿಪ್ರ ಸಂಪದದ ಅಧ್ಯಕ್ಷ ಸುಧಾಕರ ರಾವ್ ,ಪುನರೂರು ಪ್ರತಿಷ್ಥಾನದ ಗೌರವಾಧ್ಯಕ್ಷೆ ಎಚ್ ಕೆ ಉಷಾರಾಣಿ, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು,ಜನ ವಿಕಾಸ ಸಮಿತಿ ಅಧ್ಯಕ್ಷ ದಾಮೋದರ ಶೆಟ್ಟಿ ಕೊಡೆತ್ತೂರು, ಸುರೇಶ್ ರಾವ್ ನೀರಳಿಕೆ, ಪ್ರಾಣೇಶ್ ಭಟ್,ಜೀವನ್ ಶೆಟ್ಟಿ ಅಂಗರಗುಡ್ಡೆ , ಭಾಗ್ಯರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.ಪುನರೂರು ಪ್ರತಿಷ್ಠಾನ(ರಿ) ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು, ಹಿತಾ ಉಮೇಶ್ ನಿರೂಪಿಸಿದರು. ಶಶಿಕರ್ ಕೆರೆಕಾಡು ಧನ್ಯವಾದ ಅರ್ಪಿಸಿದರು.
ಬಾಲವಿಕಾಸ ಶಿಬಿರದಲ್ಲಿ ಉತ್ತಮ ಶಿಕ್ಷಣ ನೀಡಿದ ಯೋಗ ತರಬೇತುದಾರ ಜಯ ಮುದ್ದು ಶೆಟ್ಟಿ, ಶ್ಲೋಕ ಶಿಕ್ಷಕ ಜಿತೇಂದ್ರ ವಿ ರಾವ್, ಆವೆ ಮಣ್ಣಿನ ಕಲಾಕಾರ ವೆಂಕಿ ಫಲಿಮಾರ್,ಭಜನಾ ತರಬೇತುದಾರ ಸುರೇಶ್ ಆಚಾರ್ಯ ಹಳೆಯಂಗಡಿ, ಅಭಿನಯ ತರಬೇತುದಾರ ತಾರನಾಥ ಉರ್ವ ರವರನ್ನು ಗೌರವಿಸಲಾಯಿತು. ಹಾಗೂ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು.
Kshetra Samachara
15/05/2022 05:28 pm