ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಮೇ.15ರಂದು ವಾಣಿಯನ್ ಗಾಣಿಗ ಸಮುದಾಯದ ವಾಣಿಯೋತ್ಸವ ಕಾರ್ಯಕ್ರಮ

ವಿಟ್ಲ: ವಿಟ್ಲ ಭಾಗದಲ್ಲಿ ವಾಣಿಯನ್ ಗಾಣಿಗ ಸಮುದಾಯದ 140 ಕುಟುಂಬಗಳಿದ್ದು, ಸಂಘಟನೆಯ ದೃಷ್ಟಿಯಿಂದ ಮೇ.15ರಂದು ಮೈರ ವಿಟ್ಲ ಗಾರ್ಡನ್ ಸಭಾಭವನದಲ್ಲಿ ವಾಣಿಯೋತ್ಸವ 2022 ಹಮ್ಮಿಕೊಳ್ಳಲಾಗಿದೆ ಎಂದು ವಿಟ್ಲ ವಾಣಿಯನ್ ಗಾಣಿಗ ಸಮುದಾಯ ಸೇವಾ ಸಂಘ ಅಧ್ಯಕ್ಷ ಉದಯಕುಮಾರ್ ದಂಬೆ ಹೇಳಿದರು.

ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗ್ಗೆ 9ಕ್ಕೆ ಸಮುದಾಯದ ಮಕ್ಕಳಿಂದ ನೃತ್ಯ ವೈವಿಧ್ಯ, 10.30ರಿಂದ ಧಾರ್ಮಿಕ ಚಿಂತನೆ ನಡೆಯಲಿದ್ದು, ಹಿಂದೂ ಚಿತ ಚಿಂತಕ ಚಂದ್ರಹಾಸ ಮುರೂರು ಭಾಗವಹಿಸಲಿದ್ದು, ವಿಟ್ಲ ಸೀಮೆಯ ಕೋಮರ ಅಚ್ಚನ್ಮಾರರು, ಚೆಟ್ಟಿಯಾರ್, ಜಂಡಕ್ಕ, ಬೆಳ್ಳಿಪಾಡಚ್ಚನ್ ಪಟ್ಟಿಗಾರರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

11.15ರಿಂದ ಸನ್ಮಾನ- ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದ್ದು, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭಾ ಉದ್ಘಾಟನೆ ಮಾಡಲಿದ್ದು, ಇಂಧನ ಸಚಿವ ವಿ. ಸುನಿಲ್ ಕುಮಾರ್ ಆರೋಗ್ಯ ನಿಧಿ ಹಾಗೂ ಶಾಸಕ ಸಂಜೀವ ಮಠಂದೂರು ವಿದ್ಯಾನಿಧಿ ಲೋಕಾರ್ಪಣೆ ಮಾಡಲಿದ್ದಾರೆ. ಕೆ. ರಾಮ ಮುಗ್ರೋಡಿ ಮಂಗಳೂರು, ಬಾಲಕೃಷ್ಣ ವಾಟೆ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ವಿವಿಧ ಗಣ್ಯರು ಭಾಗವಹಿಸಲಿದ್ದಾರೆಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ದಿನಕರ್ ಅಳಿಕೆ, ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್, ಸದಸ್ಯ ಜಯರಾಮ್ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

13/05/2022 05:08 pm

Cinque Terre

3.98 K

Cinque Terre

0

ಸಂಬಂಧಿತ ಸುದ್ದಿ