ಕಾಪು : ವಿಶ್ವಭಾರತಿ ಕಾಪು ಸಂಘಟನೆ ಆಶ್ರಯದಲ್ಲಿ ಮೇ 14 ರಿಂದ 16 ರವರೆಗೆ ಕಾಪು ಕಾಳಿಕಾಂಬ ದೇವಸ್ಥಾನದ ವಠಾರದಲ್ಲಿ ಸ್ವದೇಶಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಸದಸ್ಯ ರಂಗ ರಂಗಕರ್ಮಿ ಬಾಸುಮ ಕೊಡಗು ಹೇಳಿದರು.
ಮೇಳ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೇಳದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ 14ರಂದು ಬೆಳಗ್ಗೆ 9.30ಕ್ಕೆ ಮೇಳವನ್ನು ಉದ್ಘಾಟಿಸಲಿದ್ದಾರೆ.
ಉದ್ಯೋಗ ನೋಂದಣಿ ಸಹಿತ ಉದ್ಯೋಗ ಮಾಹಿತಿಯನ್ನು ಮೇಳದಲ್ಲಿ ಆಯೋಜಿಸಲಾಗಿದೆ. 80ಕ್ಕೂ ಅಧಿಕ ಸ್ವದೇಶಿ ಉತ್ಪನ್ನಗಳ ಮಾರಾಟ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳದಲ್ಲಿ ಗಮನ ಸೆಳೆಯಲಿವೆ.
ಮೂರು ದಿನಗಳ ಪರ್ಯಂತ ಗಿರೀಶ್ ಕಾಸರವಳ್ಳಿ ಚಿತ್ರ ಪ್ರದರ್ಶನ ಸೇರಿದಂತೆ ಯುವರತ್ನ ಸ್ಪರ್ಧೆ,ಆದರ್ಶ ದಂಪತಿ ಸ್ಪರ್ಧೆ, ನಾರಿ ಧ್ವನಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ಸಂಘಟನೆಯ ಅಧ್ಯಕ್ಷ ಶ್ರೀಕಾಂತ್ ಆಚಾರ್ಯ, ಮೇಳದ ಸಂಚಾಲಕ ಆನಂದ ಕುಂದರ್ ಉಪಸ್ಥಿತರಿದ್ದರು.
Kshetra Samachara
13/05/2022 01:07 pm