ಉಡುಪಿ ಜನರಲ್ಲಿ ಕರುಣೆ ಕಳೆದುಕೊಂಡಾಗ ಸ್ವಾರ್ಥ ಭಾವನೆ ಅಧಿಕವಾಗುತ್ತದೆ. ಸಮಾಜದಲ್ಲಿ ಕರುಣೆ ಮತ್ತು ಮಾನವೀಯ ವ್ಯಕ್ತಿತ್ವಗಳು ಹೆಚ್ಚಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.ಸಚಿವರು ಭಾರತೀಯ ರೆಡ್‌ಕ್ರಾಸ್ ಭವನದಲ್ಲಿ ನಡೆದ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ನಮ್ಮ ಹಿರಿಯರು ಹೆಚ್ಚಿನ ಮಾನವೀಯ ಮತ್ತು ಕರುಣಾ ಗುಣಗಳನ್ನು ಹೊಂದಿದ್ದು, ಹಲವು ಜನಪರ ಕಾರ್ಯಗಳು ಮಾಡಿ, ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅವುಗಳನ್ನು ಮುಂದುವರಿಸುವುದು ನಮ್ಮ ಕರ್ತವ್ಯವಾಗ ಬೇಕು. ಮನುಷ್ಯ ಕರುಣೆ ಮತ್ತು ಮಾನವೀಯ ಗುಣಗಳನ್ನು ಕಳೆದುಕೊಂಡಾಗ ಸ್ವಾರ್ಥ ಭಾವ ಮೂಡಿ, ಬದುಕಿನಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಾನೆ. ಆದ್ದರಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಮಾನವೀಯ ಗುಣಗಳಿಂದ ಕಾರ್ಯನಿರ್ವಹಿಸ ಬೇಕು ಎಂದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
Kshetra Samachara
09/05/2022 08:07 pm