ಮುಲ್ಕಿ: ಕಿನ್ನಿಗೋಳಿ ಶಾಂತಿನಗರ ಗುತ್ತಕಾಡು ಶ್ರೀ ಮೂಕಾಂಬಿಕಾ ದೇವಸ್ಥಾನದ ವತಿಯಿಂದ ಇಶಾ ಫೌಂಡೇಶನ್ ಸದ್ಗುರುಗಳು ನಡೆಸುತ್ತಿರುವ "ಮಣ್ಣನ್ನು ಉಳಿಸಿ ಅಭಿಯಾನ"ದ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಜಾಥಾ ನಡೆಯಿತು
ಕಾರ್ಯಕ್ರಮಕ್ಕೆ ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ, ಚಾಲನೆ ನೀಡಿದರು.ಮಾಜಿ ತಾ ಪಂ ಸದಸ್ಯ ದಿವಾಕರ ಕರ್ಕೇರ ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ ಉಪಸ್ಥಿತರಿದ್ದರು. ಮಣ್ಣಿನ ಅಭಿಯಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕಾರ್ಯಕರ್ತರು ಮಾಹಿತಿ ನೀಡಿದರು ಹಾಗೂ ಬಿತ್ತಿ ಪತ್ರ ಹಂಚಿದರು.
ಸಮಾರೋಪ ಸಮಾರಂಭವು ಶ್ರೀ ಮೂಕಾಂಬಿಕಾ ದೇವಸ್ಥಾನದ ವಠಾರದಲ್ಲಿ ಧರ್ಮದರ್ಶಿ ವಿವೇಕಾನಂದ ಅಥ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ, ಇಶಾ ಫೌಂಡೇಶನ್ ಸ್ವಯಂ ಸೇವಕ ದೀಪಕ್ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಅನೇಕ ಸಂಘ ಸಂಸ್ಥೆಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮುಲ್ಕಿ ಠಾಣಾ ಪೊಲೀಸರು ಹಾಗೂ ಬಜಪೆ ಠಾಣಾ ಪೊಲೀಸರು ಬಂದೋಬಸ್ತ್ ವಹಿಸಿದ್ದರು. ಜಾಥಾ ಶ್ರೀ ಮೂಕಾಂಬಿಕಾ ದೇವಸ್ಥಾನದಿಂದ ಕಟೀಲು ದೇವಸ್ಥಾನ ಉಲ್ಲಂಜೆ ಕಿನ್ನಿಗೋಳಿ ಮಾರ್ಗವಾಗಿ ಸಾಗಿ ಮೂಕಾಂಬಿಕಾ ದೇವಸ್ಥಾನದಲ್ಲಿ ಸಮರೋಪಗೊಂಡಿತು.
Kshetra Samachara
09/05/2022 10:27 am