ಬ್ರಹ್ಮಾವರ: ಗುರುಗಳಾದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮರಣಾರ್ಥ ನೀಲಾವರ ಗೋಶಾಲೆ ಪಕ್ಕದಲ್ಲಿ ಸರಕಾರ ʼಸ್ಮೃತಿ ವನʼ ನಿರ್ಮಾಣಕ್ಕೆ ಮುಂದಾಗಿರುವುದು ಅಭಿನಂದನೀಯ. ಮಾಜಿ ಸಿಎಂ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಘೋಷಣೆ ಮಾಡಿದ್ದ ಯೋಜನೆ ಇದಾಗಿದೆ. ಇದಕ್ಕಾಗಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ನೀಲಾವರದಲ್ಲಿ ಗೋಶಾಲೆಯ ಪಕ್ಕ ʼಸ್ಮೃತಿ ವನʼ ದ ಭೂಮಿ ಪೂಜೆ ಮತ್ತು ಶಿಲಾನ್ಯಾಸದ ಬಳಿಕ ಶ್ರೀಗಳು ಮಾತನಾಡಿದರು. ಗೋಶಾಲೆ ಸಮೀಪವೇ ʼಸ್ಮೃತಿ ವನʼ ಇರುವುದರಿಂದ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬಹುದು. ಆದಷ್ಟು ಶೀಘ್ರ ನಿರ್ಮಾಣ ಕಾಮಗಾರಿ ಪೂರೈಸಲಿ ಎಂದು ಪೇಜಾವರ ಶ್ರೀ ಶುಭ ಹಾರೈಸಿದರು. ಅರಣ್ಯ ಮತ್ತು ಆಹಾರ ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ, ಶಾಸಕ ರಘುಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
07/05/2022 10:11 pm