ಉಡುಪಿ: ನಮ್ಮನ್ನು ಸದಾ ಸಂರಕ್ಷಿಸುವ ದೇವನ ಬಗ್ಗೆ ಸರಿಯಾದ ಅರಿವು ನಮಗಿರಬೇಕು. ಅವನು ಇಡೀ ವಿಶ್ವದ ಕಣ ಕಣಗಳಲ್ಲಿ ನೆಲೆಸಿದ್ದಾನೆ. ಅವನು ನಿರ್ಮಿಸಿದ ಈ ವಿಶ್ವವೂ ಪರಮ ಪಾವನವಾದದ್ದು. ಇಲ್ಲಿರುವ ಪ್ರಾಚೀನ ನದಿ ಸರೋವರ ಮಂದಿರಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇವೆಲ್ಲದರ ಜೀರ್ಣೋದ್ಧಾರ ಕಾರ್ಯಗಳಿಂದ ಅಶ್ವಮೇಧ ಮೊದಲಾದ ಯಾಗದ ಮಹಾ ಫಲವು ದೊರೆಯುತ್ತದೆ ಎಂದು ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ತಿಳಿಸಿದರು.
ಉಡುಪಿಯ ಇತಿಹಾಸ ಪ್ರಸಿದ್ಧ ಪುತ್ತಿಗೆ ಮಠದ ಆಡಳಿತಕ್ಕೆ ಒಳಪಟ್ಟಿರುವ ಪಣಿಯಾಡಿಯ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಸಂಕಲ್ಪಿಸಿದ್ದ ಬ್ರಹ್ಮಕಲಶೋತ್ಸವದ ಅಂಗವಾಗಿ ಸಹಸ್ರ ಕಲಶಾಭಿಷೇಕವನ್ನು ಇಂದು ಬೆಳಿಗ್ಗೆ ಮಿಥುನ ಲಗ್ನದಲ್ಲಿ ವೈದಿಕ ವೃಂದದವರೊಂದಿಗೆ ನೆರವೇರಿಸಿದರು.
ಬಹು ವೈಭವದಿಂದ ನಡೆದ ಈ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ಪ್ರಧಾನ ತಂತ್ರಿಗಳಾದ ವೇ.ಮೂ. ಹಯವದನ ತಂತ್ರಿಗಳ ನೇತೃತ್ವದಲ್ಲಿ ನಡೆದವು.
Kshetra Samachara
07/05/2022 05:19 pm