ಮುಲ್ಕಿ: ಪಕ್ಷಿಕೆರೆ ಸಮೀಪದ ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಗಳಿಗೆ ಸಂಬಂಧಪಟ್ಟ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾಮಹೋತ್ಸವದ ಪ್ರಯುಕ್ತ ಹಗಲು ರಥೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಎಪ್ರಿಲ್ 24ರಂದು ದ್ವಜಾರೋಹಣ,ಮಧ್ಯಾಹ್ನ ಮಹಾಪೂಜೆ, ರಾತ್ರಿ ಉತ್ಸವ ಬಲಿ, ಎಪ್ರಿಲ್ 25 ಮಧ್ಯಾಹ್ನ ಮಹಾಪೂಜೆ, ಋಕ್ ಸಂಹಿತಾ ಪಾರಾಯಣ ಮತ್ತು ಕಲಶಾಭಿಷೇಕ ರಾತ್ರಿ ಉತ್ಸವ ಬಲಿ, ಪಡುಸವಾರಿ ನಡೆಯಿತು. ಎಪ್ರಿಲ್ 26 ಮಧ್ಯಾಹ್ನ ಮಹಾಪೂಜೆ, ಹಗಲು ರಥೋತ್ಸವ ರಾತ್ರಿ ಉತ್ಸವ ಬಲಿ, ಭೂತ ಬಲಿ, ಕವಾಟ ಬಂಧನ ಉತ್ಸವ ಬಲಿ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭ ಆಡಳಿತ ಮುಕ್ತೇಸರ ಸೀತಾರಾಮ ಶೆಟ್ಟಿ ದುರ್ಗಾದಯಾ, ಅರ್ಚಕ ವಿಶ್ವೇಶ್ರವ ಭಟ್, ಮಹಿಳಾ ಮಂಡಲ, ಯುವಕ ಮಂಡಲನಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಎಪ್ರಿಲ್ 27 ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ ರಾತ್ರಿ ಮೂಡು ಸವಾರಿ, ರಥೋತ್ಸವ, ಅವಭೃತೋತ್ಸವ ವಾರಾಹಿಕೋಲ, ಧ್ವಜಾವರೋಹಣ ನಡೆಯಲಿದೆ.
Kshetra Samachara
27/04/2022 10:56 am