ಮಂಗಳೂರು: 8ನೇ ತರಗತಿಯ ವಿದ್ಯಾರ್ಥಿನಿಗೆ ಟಿಕೆಟ್ನಲ್ಲಿ ಬರೆದು ಫೋನ್ ನಂಬರ್ ನೀಡಿದ್ದಾನೆಂದು ಆರೋಪಿಸಿ ಬಸ್ ನಿರ್ವಾಹಕನಿಗೆ ಧರ್ಮದೇಟು ನೀಡಿರುವ ಘಟನೆ ಮಂಗಳೂರಿನ ಬೋಂದೆಲ್ನಲ್ಲಿ ನಡೆದಿದೆ.
ಬಸ್ ನಿರ್ವಾಹಕ 8ನೇ ತರಗತಿಯ ವಿದ್ಯಾರ್ಥಿನಿಗೆ ಟಿಕೆಟ್ನಲ್ಲಿ ಫೋನ್ ನಂಬರ್ ಬರೆದು ನೀಡಿದ್ದಾನೆ. ಈ ಬಗ್ಗೆ ತಿಳಿದುಕೊಂಡ ಬಾಲಕಿಯ ತಾಯಿ ಹಾಗೂ ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿದ್ದಾರೆ. ನಗರದ ಬೊಂದೆಲ್ ನಿಂದ ಸ್ಟೇಟ್ಸ್ ಬ್ಯಾಂಕ್ ನಡುವೆ ಸಂಚರಿಸುವ ರೂಟ್ ನಂಬರ್ 19 ರ ಬಸ್ ನಿರ್ವಾಹಕ ಈ ಕೃತ್ಯ ಎಸಗಿದ್ದನು. ಈ ಬಗ್ಗೆ ತಿಳಿದ ತಕ್ಷಣ ಬಾಲಕಿ ತಾಯಿ ಕಂಡಕ್ಟರ್ ಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈ ಬಗ್ಗೆ ಇನ್ನಷ್ಟೇ ಪೊಲೀಸರು ಪ್ರಕರಣ ದಾಖಲಿಸಬೇಕಾಗಿದೆ.
PublicNext
24/04/2022 11:05 am