ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ.24 ರವಿವಾರ ಬೆಳಿಗ್ಗೆ 9.15ಕ್ಕೆ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಸುಬ್ರಹ್ಮಣ್ಯ ದೇವರ ಶಿಲಾಮಯ ಗರ್ಭಗುಡಿ, ಸುತ್ತು ಪಾಳಿಯ ಶಿಲಾನ್ಯಾಸವು ಪೇಜಾವರ ಶ್ರೀ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ವೇಮೂ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿದರು.
ಅವರು ಕ್ಷೇತ್ರದ ಜೀರ್ಣೋದ್ಧಾರದ ಅಂಗವಾಗಿ ಕ್ಷೇತ್ರದಲ್ಲಿ ನಡೆದ ಊರ ಪರವೂರ ಭಕ್ತರ ಗ್ರಾಮಸ್ಥರ ಸಂಘ-ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್ ಮಾತನಾಡಿ ಈಗಾಗಲೇ ಕ್ಷೇತ್ರದಲ್ಲಿ ಭಕ್ತರ ಕರಸೇವೆ, ಭಜನಾ ಸೇವೆ ನಡೆಯುತ್ತಿದ್ದು ಜೀರ್ಣೋದ್ಧಾರದ ಪ್ರಕ್ರಿಯೆಗಳು ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜೀರ್ಣೋದ್ದಾರದ ಬಗ್ಗೆ ಭಕ್ತರ ಸಹಕಾರ ಅಗತ್ಯ ಎಂದರು.
ಈ ಸಂದರ್ಭ ಕ್ಷೇತ್ರದ ಅರ್ಚಕ ಮಧುಸೂದನ ಆಚಾರ್ಯ, ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ಮೋಹನ್ ದಾಸ್,ಸದಸ್ಯ ಗುರುರಾಜ ಎಸ್ ಪೂಜಾರಿ, ಧಾರ್ಮಿಕ ಪರಿಷತ್ ಸದಸ್ಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿಜಯಕುಮಾರ್ ರೈ, ಎಲ್.ಕೆ
ಸಾಲ್ಯಾನ್, ಪುರುಷೋತ್ತಮ ರಾವ್, ವಿಜಯಕುಮಾರ್ ರೈ, ಯೋಗೀಶ್ ಕೋಟ್ಯಾನ್, ವಿಪುಲ ಡಿ ಶೆಟ್ಟಿಗಾರ್, ಶಾರದಾ ಬಂಗೇರ, ವಿಶ್ವನಾಥ್, ಊರ ಪರವೂರ ಭಕ್ತಾದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
19/04/2022 08:49 pm