ಮಂಗಳೂರು: ಸಿಕ್ಕಿಂ ಕಟಾವ್ ನಲ್ಲಿರುವ ಚೀನಾ ಗಡಿಯಲ್ಲಿ ತುಳುನಾಡ ಬಾವುಟವನ್ನು ಹಾರಿಸಿ ಕರಾವಳಿಯ ನಾಲ್ವರು ಬೈಕ್ ರೈಡರ್ಸ್ ತಮ್ಮ ಭಾಷಾ ಪ್ರೇಮವನ್ನು ಮೆರೆದಿದ್ದಾರೆ. ಅಲ್ಲದೆ 'ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕೆಂದು ಪ್ರಧಾನಿ ಮೋದಿ ಅವರಿಗೆ ಹಿಮಾಚಲ ಪ್ರದೇಶದ ಹಿಕ್ಕಿಂನಲ್ಲಿರುವ ವಿಶ್ವದ ಅತೀ ಎತ್ತರದ ಪೋಸ್ಟ್ ಆಫೀಸ್‌ನಿಂದ ಪತ್ರ ಬರೆದಿದ್ದಾರೆ. ಈ ಪೋಸ್ಟ್ ಆಫೀಸ್ ಸಮುದ್ರ ಮಟ್ಟದಿಂದ 15 ಸಾವಿರ ಅಡಿ ಎತ್ತರದಲ್ಲಿದೆ.
ಖ್ಯಾತ ಯೂಟ್ಯೂಬರ್ ಸಚಿನ್ ಶೆಟ್ಟಿ, 'ಅನ್ನಿ' ಅರುಣ್, ಅರ್ಜುನ್ ಪೈ, ಸಾಯಿಕಿರಣ್ ಶೆಟ್ಟಿ ಹಾಗೂ ಅನ್ನಿ ಅರುಣ್ ಅವರ ಪತ್ನಿ ಭಾಗ್ಯಲಕ್ಷ್ಮಿಯವರು ಈ ಬೈಕ್ ರೈಡಿಂಗ್ ತಂಡದಲ್ಲಿದ್ದರು. ಈ ತಂಡ ಸರಿ ಸುಮಾರು 9,000 ಕಿ.ಮೀ. ದೂರ ಬೈಕ್ ರೈಡಿಂಗ್ ಮಾಡಿ ಈ ಸಾಧನೆ ಮಾಡಿದೆ. ಫೆ.26ರಂದು ಡೆಲ್ಲಿಯಿಂದ ಬೈಕ್ ರೈಡಿಂಗ್ ಆರಂಭಿಸಿ ಉತ್ತರ ಪ್ರದೇಶ, ಬಿಹಾರ್, ಸಿಕ್ಕಿಂ, ಕಟಾವ್(ಚೀನಾ ಬಾರ್ಡರ್), ಹಿಮಾಚಲ ಪ್ರದೇಶ, ಉತ್ತರಾಖಂಡ, ನೇಪಾಳ ಸಂಚರಿಸಿದ ತಂಡ ಆ ಬಳಿಕ ಲಕ್ನೋ ಉತ್ತರ ಪ್ರದೇಶ, ಬಿಹಾರ್ ಮಾರ್ಗವಾಗಿ ಮರಳಿ ತಾಯ್ನಾಡಿಗೆ ಆಗಮಿಸಿದೆ. ಈಗ ಅತ್ಯಂತ ಚಳಿ ಇದ್ದು, ಬೈಕ್ ರೈಡಿಂಗ್ ಗೆ ಈ ಕಾಲ ಪ್ರಶಸ್ತವಲ್ಲ. ಆದರೂ ಗಟ್ಟಿ ಧೈರ್ಯದೊಂದಿಗೆ -12°C ಚಳಿಯಲ್ಲೂ ಹಿಮಪಾತಗಳ ಮಧ್ಯೆಯೂ ತಂಡ ಬೈಕ್ ರೈಡಿಂಗ್ ತಮ್ಮ ಗುರಿ ಮುಟ್ಟಿದೆ.
ಸುಮಾರು 52 ದಿನಗಳ ಈ ಪ್ರಯಾಣದ ವೀಡಿಯೋವನ್ನು ಎಲ್ಲಾ ವಿವರಗಳ ಸಹಿತ ದಿನವೂ ತಮ್ಮ ಯೂಟ್ಯೂಬ್ ನಲ್ಲಿ ಸಚಿನ್ ಶೆಟ್ಟಿಯವರು ದಾಖಲಿಸಿದ್ದಾರೆ. ಇದೀಗ ಈ ತಂಡ ತಮ್ಮ ಗುರಿಯನ್ನು ತಲುಪಿ ಮತ್ತೆ ತಾಯ್ನಾಡಿಗೆ ಮರಳಿದೆ. ಈ ತಂಡವನ್ನು ತುಳುನಾಡ ರಕ್ಷಣಾ ವೇದಿಕೆ ಸೇರಿದಂತೆ ಅನೇಕ ಅಭಿಮಾನಿಗಳು ಆದರ ಪೂರ್ವಕವಾಗಿ ಸ್ವಾಗತಿಸಿದೆ.
Kshetra Samachara
18/04/2022 09:52 pm