ಮುಲ್ಕಿ: ಯುವ ಪೀಳಿಗೆ ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸನಾತನ ಸಂಸ್ಕೃತಿ ಆಚರಣೆಗಳನ್ನು ಮರೆತು ಪಾಶ್ಟಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದು ಶಾಲೆಯಲ್ಲಿ ರಾಷ್ಟ್ರಧರ್ಮಸಂಸ್ಕಾರಯುಕ್ತವಾದ ನೈತಿಕ ಮೌಲ್ಯಯುಳ್ಳ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಉಡುಪಿ ಪೇಜಾವರ ಅದೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ಕಟೀಲು ದೇವಳದ ಸರಸ್ವತೀ ಸದನದಲ್ಲಿ ಎಪ್ರಿಲ್ 10ರವರೆಗೆ ನಡೆಯಲಿರುವ ಶ್ರೀ ರಾಮೋತ್ಸವದ ಕಾರ್‍ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ಮಕ್ಕಳಿಗೆ ನಾಮಕರಣ ಮಾಡುವಲ್ಲಿ ಎಡವಿದ್ದು , ನಮ್ಮ ದೇವರುಗಳ ಹೆಸರು ಇಟ್ಟು ನಮ್ಮ ಸಂಸ್ಕೃತಿಯ ಉಳಿವಿಕೆಗೆ ನಾವು ಕಟಿಬದ್ಧರಾಗಬೇಕು ಈ ನಿಟ್ಟಿನಲ್ಲಿ ನಮ್ಮ ಸಮಾಜ ಹಿಂದು ಸಮಾಜವಾಗಿ ಉಳಿಯಬೇಕಾದರೆ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ,ಸಂಸದ ನಳಿನ್ ಕುಮಾರ್ ಮಾತನಾಡಿ ಭಾರತೀಯ ಸಂಸ್ಕೃತಿ ಶ್ರೇಷ್ಟವಾಗಿದ್ದು, ವೇದ ಉಪನಿಷತ್, ಮಹಾಭಾರತಧಂತ ಗ್ರಂಥಗಳನ್ನು ವಿಶ್ವಕ್ಕೆ ಪರಿಚಯಿಸಿ ಆಗಿನ ಕಾಲದಲ್ಲಿ ವೈದ್ಯಕೀಯ, ತತ್ವ ಶಾಸ್ತ್ರ, ಯೋಗ ಶಿಕ್ಷಣ, ವಿಮಾನ ಕಂಡು ಹಿಡುಯುವಲ್ಲಿ ನಮ್ಮ ಪುರಾಣ ಗ್ರಂಥಗಳು ಹಾಗೂ ಮುಂದಿನ ಇಷ್ಟು ವರ್ಷದಲ್ಲಿ ಗ್ರಹಣ ನಡೆಯುತ್ತಿದೆ ಎಂದು ನಿಖರವಾಗಿ ಹೇಳುವ ಪಂಚಾಂಗವನ್ನು ಹುಟ್ಟು ಹಾಕಿದ್ದೆ ಭಾರತ ದೇಶವಾಗಿದೆ .ಈ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿಯನ್ನು ಮರೆಯಬಾದು ಎಂಬ ನಿಟ್ಟಿನಲ್ಲಿ ಯುಗಾದಿ ಹಬ್ಬ ಹಾಗು ರಾಮ ನವಮಿಯನ್ನು ದೇವಸ್ಥಾನದಲ್ಲಿ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್, ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ , ಅರ್ಚಕರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ , ಅನಂತ ಪದ್ಮನಾಭ ಆಸ್ರಣ್ಣ , ವೆಂಕಟರಮಣ ಆಸ್ರಣ್ಣ , ಚಲನ ಚಿತ್ರನಟ ಗುರುಕಿರಣ್ ಮತ್ತಿತರರಿದ್ದರು.
Kshetra Samachara
03/04/2022 08:40 pm