ಉಡುಪಿ: ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ 'ಮನೆಮನೆ ಭಜನೆ -ಗ್ರಾಮ ಭಜನೆ'ಯನ್ನು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು ಶನಿವಾರ ಉದ್ಘಾಾಟಿಸಿದರು.
ದೇವಸ್ಥಾನವೊಂದು ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳುವಾಗ ಜಾತಿ, ಮತ ಭೇದವಿಲ್ಲದೆ ಆ ಗ್ರಾಮದ ಎಲ್ಲಾ ಭಕ್ತರ ಮನೆಗಳಲ್ಲಿ ಭಜನೆ ಮಾಡುವುದು ವಿಶಿಷ್ಟ ಕಲ್ಪನೆಯ ಕ್ರಾಂತಿಯಾಗಿದೆ. ನಾವು ಬೇರೆ ಬೇರೆ ರೀತಿಯ ಭಜನೆಗಳನ್ನು ಕಂಡಿದ್ದೇವೆ. ಇದು ಮಾತ್ರ ವಿಶಿಷ್ಟವಾದುದು. ಇದರಿಂದ ದೇವಸ್ಥಾಾನದ ಜತೆ ಮನೆಗಳಲ್ಲಿಯೂ ಸಾನಿಧ್ಯ ವೃದ್ಧಿಯಾಗುತ್ತದೆ ಎಂದು ಶ್ರೀಪಾದರು ಹೇಳಿದರು.
ದೇವಸ್ಥಾನದ ಸ್ಟಿಕ್ಕರ್ ಬಿಡುಗಡೆಗೊಳಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ವಿನೂತನ ಕಲ್ಪನೆಯನ್ನು ಬೇರೆ ದೇವಸ್ಥಾನಗಳಲ್ಲಿಯೂ ಅಳವಡಿಸಿಕೊಳ್ಳಬಹುದು. ದೇವಸ್ಥಾನದಲ್ಲಿ ಹಬ್ಬದ ವಾತಾವರಣವಿರುವಂತೆ ಭಕ್ತರ ಮನೆಗಳಲ್ಲಿಯೂ ಹಬ್ಬದ ವಾತಾವರಣ ಮೂಡಲು ಮನೆ ಮನೆ ಭಜನೆ ಸಹಕಾರಿಯಾಗುತ್ತದೆ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸದಸ್ಯರಾದ ರಾಕೇಶ್ ಜೋಗಿ ಸ್ವಾಗತಿಸಿ ಸಂದೀಪ್ ಸನಿಲ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
03/04/2022 06:02 pm