ಕುಂದಾಪುರ: ಕುಂದಾಪುರ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ವಕೀಲ ಬನ್ಮಾಡಿ ಸೋಮನಾಥ ಹೆಗ್ಡೆ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.ಮುಂದಿನ ಎರಡು ವರ್ಷಗಳ ಅವಧಿಗೆ ಇವರು ಅಧ್ಯಕ್ಷರಾಗಿರುತ್ತಾರೆ.
ಕಾರ್ಯದರ್ಶಿ ಸೇರಿದಂತೆ ನಾಲ್ಕು ಮಂದಿ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಇಂದು ಚುನಾವಣೆ ನಡೆದಿತ್ತು. ಸಂಘದ ಕಚೇರಿಯಲ್ಲಿ ನಡೆದ ಬಾರ್ ಅಸೋಸಿಯೇಷನ್ ಚುನಾವಣೆಯ ಫಲಿತಾಂಶ ಸಂಜೆ ಹೊರಬಿದ್ದಿದ್ದು, ಬನ್ನಾಡಿ ಸೋಮನಾಥ ಹೆಗ್ಡೆ ಗೆಲುವು ಸಾಧಿಸಿದರು.
ಕಾರ್ಯದರ್ಶಿಯಾಗಿ ಶ್ರೀನಾಥ ರಾವ್, ಉಪಾಧ್ಯಕ್ಷರಾಗಿ ಬೀನಾ ಜೋಸೇಫ್, ಖಜಾಂಚಿ ದಿನಾಕರ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ರಿತೇಶ್ ಅವಿರೋಧವಾಗಿ ಆಯ್ಕೆಗೊಂಡರು.
Kshetra Samachara
01/04/2022 06:19 pm