ಮಂಗಳೂರು : ಸಾರಾ ಅಬೂಬಕ್ಕರ್ ಅವರಿಗೆ ಬರಗೂರು ಪ್ರಶಸ್ತಿ ಒಲಿದು ಬಂದಿದೆ. ಹೌದು ಬೆಂಗಳೂರುಃ ಕರಾವಳಿಯ ಹಿರಿಯ ಕನ್ನಡ ಲೇಖಕಿ ಸಾರಾ ಅಬೂಬಕ್ಕರ್ (85) ಅವರಿಗೆ ನಾಡೋಜ ಬರಗೂರು ಪ್ರತಿಷ್ಠಾನ ಕೊಡಮಾಡುವ ಬರಗೂರು ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಪ್ರಶಸ್ತಿಯು 25 ಸಾವಿರ ರೂ.ನಗದು ಮತ್ತು ಚಿನ್ನದ ಪದಕ ಒಳಗೊಂಡಿದೆ. ಪ್ರಶಸ್ತಿಯನ್ನು ಸಾರಾ ಅಬೂಬಕ್ಕರ್ ಅವರ ಮಂಗಳೂರಿನ ಹ್ಯಾಟ್ ಹಿಲ್ ನಲ್ಲಿರುವ ನಿವಾಸದಲ್ಲಿ ಪ್ರದಾನ ಮಾಡಲಾಯಿತು.
ಬರಗೂರು ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಸುಂದರರಾಜ ಅರಸು,ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಲೋಲಾಕ್ಷ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಲೇಖಕಿ ಜ್ಯೋತಿ ಚೇಳಾಯರು, ಲೇಖಕಿ ಷರೀಫ, ಮನಪಾ ಸದಸ್ಯೆ ಸಂಧ್ಯಾ ಆಚಾರ್, ಪತ್ರಕರ್ತ ಮಂಜುನಾಥ್ ಸಾಗರ್ ಉಪಸ್ಥಿತರಿದ್ದು ಶುಭ ಹಾರೈಸಿದರು.
Kshetra Samachara
29/03/2022 03:03 pm