ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಜೀರ್ಣೋದ್ದಾರ ಬಗ್ಗೆ ಗ್ರಾಮಸ್ಥರ ಹಾಗೂ ಭಕ್ತಾಭಿಮಾನಿಗಳ ಸಭೆ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿದಾಸಭಟ್ ವಹಿಸಿ ಮಾತನಾಡಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಭಕ್ತರ ಸಹಕಾರ ಮುಖ್ಯವಾಗಿದ್ದು ಮುಂದಿನ ಏಪ್ರಿಲ್ 5 ಹಾಗೂ 6 ರಂದು ಶ್ರೀ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ವ್ಯವಸ್ಥಿತ ರೀತಿಯಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ದೇವಸ್ಥಾನದ ಪ್ರಧಾನ ಅರ್ಚಕ ಮಧುಸೂದನ್ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಮೋಹನದಾಸ್, ರತ್ನಾಕರ ಯಾನೆ ಕಾಂತಣ್ಣ ಗುರಿಕಾರ, ವ್ಯವಸ್ಥಾಪನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ಶ್ರೀ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪನೆ ಮಾಡಿದ ಬಳಿಕ ನಿತ್ಯ ಭಜನೆ, ದೇವಸ್ಥಾನದ ಪುನರ್ ನಿರ್ಮಾಣಕ್ಕಾಗಿ ಶ್ರಮದಾನ, ದೇವಸ್ಥಾನದ ಪುರಾತನ ರಥದ ದುರಸ್ತಿ, ಜೀರ್ಣೋದ್ಧಾರದ ಬಗ್ಗೆ ವಿವಿಧ ಸಮಿತಿಗಳನ್ನು ರಚಿಸುವ ಬಗ್ಗೆ ಜಿಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಹೇಮನಾಥ ಅಮಿನ್, ವಿನೋದ್ ಬೊಳ್ಳೂರು, ಪುನರೂರು ವಿಪ್ರ ಸಂಪದದ ಅಧ್ಯಕ್ಷ ಸುಧಾಕರ ರಾವ್ , ಮಹಿಳಾ ಮಂಡಲದ ಅಧ್ಯಕ್ಷ ಅನುಪಮಾ ರಾವ್ ಮತ್ತಿತರರು ಮಾತನಾಡಿದರು.
Kshetra Samachara
27/03/2022 09:02 pm