ಸುರತ್ಕಲ್: ಸುರತ್ಕಲ್ ಸಮೀಪದ ಕೃಷ್ಣಾಪುರ ಐದನೇ ವಿಭಾಗದ ಶ್ರೀ ರಾಮ ಭಜನಾ ಮಂಡಳಿ ಸಂಸ್ಥೆಯ ಸುವರ್ಣ ಸಂಭ್ರಮದ ಆಚರಣೆಯ ಸ್ಮರಣಿಯ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಹಿಂದೂ ಸನಾತನ ಸಂಸ್ಕೃತಿಯ ಪ್ರತೀಕವಾದ ತುಳಸಿ ಕಟ್ಟೆ ಹಾಗೂ ಭಜನಾ ತಾಳವನ್ನು ಅಯ್ದ ಮನೆಗಳಿಗೆ ಹಸ್ತಾಂತರ ಕಾರ್ಯಕ್ರಮ ಕೃಷ್ಣಾಪುರದ ಯುವಕ ಮಂಡಲದ ಪರಿಸರದಲ್ಲಿ ನಡೆಯಿತು.
ವಜ್ರದೇಹಿ ಸಂಸ್ಥಾನದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂಸ್ಕಾರಯುತ ಹಾಗೂ ಸನಾತನ ಹಿಂದೂ ಸಂಸ್ಕೃತಿಯ ಪ್ರತೀಕವಾದ ತುಳಸಿ ಕಟ್ಟೆ ಹಾಗೂ ಭಜನಾ ತಾಳವನ್ನು ಹಸ್ತಾಂತರಿಸುವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ, ತುಳಸಿಕಟ್ಟೆ ಹಿಂದೂಗಳ ಮನೆಯ ಭಕ್ತಿಯ ಶ್ರದ್ಧಾ ಕೇಂದ್ರವಾಗಿದೆ ಎಂದರು.
ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸಿದ್ಧ ಪಿ ಮಾತನಾಡಿದರು. ತುಳಸಿ ಕಟ್ಟೆಗಳ ದಾನಿ ಆಣ್ಣಪ್ಪ ದೇವಾಡಿಗ, ಮಂಗಳೂರು ಉತ್ತರ ಮಂಡಲ ಬಿಜೆಪಿ ಸಮಿತಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ,ಮನಪಾ ಸದಸ್ಯ ಪ್ರಶಾಂತ್ ಮೂಡಾಯಿಕೊಡಿ,ಸದಸ್ಯೆ ಲಕ್ಷ್ಮೀ ಶೇಖರ ದೇವಾಡಿಗ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀಧರ ಹೊಳ್ಳ ಸ್ವಾಗತಿಸಿ ನಿರೂಪಿಸಿದರು. ನಾರಾಯಣ ನಾವಡ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
Kshetra Samachara
27/03/2022 05:34 pm