ಬೈಂದೂರು: ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಇವತ್ತು ಸಂಪನ್ನಗೊಂಡಿದ್ದು ಮೂರು ದಿನಗಳ ಕಾಲ ನಡೆಯಲಿದೆ.ಆದರೆ ವರ್ಷಂಪ್ರತಿಯಂತೆ ಈ ವರ್ಷ ಉತ್ಸವ ಸಂದರ್ಭ ಹಿಂದೂಯೇತರರು ಅಂಗಡಿ ಹಾಕಲು ಹಿಂದೇಟು ಹಾಕಿದ್ದಾರೆ.
ಕಾಪು ಮಾರಿಗುಡಿ, ಪಡುಬಿದ್ರಿ ದೇವಸ್ಥಾನಗಳ ಬಳಿಕ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲೂ ಮುಸ್ಲಿಂ ಸಮುದಾಯದವರ ಸಹಿತ ಹಿಂದೂಯೇತರ ವ್ಯಾಪಾರಿಗಳಿಗೆ ಅಂಗಡಿ ತೆರೆಯಲು ಅವಕಾಶವನ್ನು ನಿರಾಕರಿಸಲಾಗಿತ್ತು.ಈ ಹಿನ್ನೆಲೆಯಲ್ಲಿ ಸ್ಟಾಲ್ ತೆರೆಯಲು ಮುಸಲ್ಮಾನರು ಯಾವುದೇ ಬೇಡಿಕೆಯನ್ನೂ ಮುಂದಿಟ್ಟಿರಲಿಲ್ಲ.ಎಲ್ಲೆಡೆ ವಿರೋಧ ಇರುವ ಕಾರಣ ,ಮುಸಲ್ಮಾನ ವ್ಯಾಪಾರಿಗಳು ವ್ಯಾಪಾರ ಮಾಡಲು ಹಿಂದೇಟು ಹಾಕಿದ್ದಾರೆ.
ಈ ಸಂಬಂಧ ಮಾತನಾಡಿರುವ ದೇವಸ್ಥಾನ ವ್ಯವಸ್ಥಾಪನಾ ಮಂಡಳಿ ಸಂಘರ್ಷ ಬೇಡ ಎಂದು ಅವಕಾಶ ನೀಡಿಲ್ಲ.
ಕೊಲ್ಲೂರು ದೇವಸ್ಥಾನದ ವಠಾರದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿದ್ದೇವೆ. ಸಾರ್ವಜನಿಕ ರಸ್ತೆಯಲ್ಲಿ ಪರವಾನಿಗೆ ಕೊಡುವ ಅಧಿಕಾರ ಪಂಚಾಯತಿಗಿದೆ ಎಂದು ಹೇಳಿದೆ.
Kshetra Samachara
25/03/2022 08:01 pm