ಉಡುಪಿ:ಅಗಲಿದ ಅಪ್ಪುಗೆ ರಾಜ್ಯಾದ್ಯಂತ ಎಲ್ಲ ವಯೋಮಾನದ ಅಭಿಮಾನಿಗಳಿದ್ದಾರೆ.ಉಡುಪಿಯ ಈ ಸ್ಪೆಷಲ್ ಪುಟಾಣಿ ಅಭಿಮಾನಿಗೆ ಕೇವಲ ಒಂದು ವರ್ಷ 11 ತಿಂಗಳು. ಹೆಸರು ಶೌರ್ಯ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಕ್ಕಾ ಫ್ಯಾನ್.
ಶೌರ್ಯ ನ ತಂದೆ-ತಾಯಿ ಸಾಯಿರಾಜ್ ಮತ್ತು ಶಿಲ್ಪ ಕೂಡಾ ಪುನೀತ್ ರಾಜಕುಮಾರ್ ಅಭಿಮಾನಿಗಳು. ಶೌರ್ಯ, ಚಿಕ್ಕವನಿರುವಾಗಿನಿಂದ ಮನೆಯಲ್ಲಿ ಅಪ್ಪು ಹಾಡುಗಳು ಚಿತ್ರಗಳು, ಟಿವಿಯಲ್ಲಿ ಬಂದರೆ ಸಾಕು , ಪುಟಾಣಿ ಮಗು ಶೌರ್ಯ ಎದ್ದು ಕುಣಿಯುವುದಕ್ಕೆ ಶುರು ಮಾಡುತ್ತಾನೆ.
ಇವತ್ತು ಜೇಮ್ಸ್ ಚಿತ್ರ ಬಿಡುಗಡೆಯಾಗಿದೆ.ಈ ಸಂದರ್ಭ, ಸಾಯಿರಾಜ್- ಶಿಲ್ಪ ದಂಪತಿ ಮಗನಿಗೆ "ಜೇಮ್ಸ್" ಟಿ- ಶರ್ಟ್ ಮಾಡಿಸಿದ್ದಾರೆ. ಟಿ- ಶರ್ಟ್ ನಲ್ಲಿ ಫೋಟೋ ಶೂಟ್ ಕೂಡ ಮಾಡಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ಅಭಿಮಾನಿಗೆ ಇಡೀ ಕುಟುಂಬ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದೆ.
Kshetra Samachara
17/03/2022 07:21 pm