ಮುಲ್ಕಿ: ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ಆವರಣದಲ್ಲಿ ಶ್ರೀ ಈಶ್ವರ ಕೃಪಾ ಸ್ವಸಹಾಯ ಸಂಘ ದ ಉದ್ಘಾಟನೆಯು ಶಿವಳ್ಳಿ ಸ್ಪಂದನ ಪಾವಂಜೆ ವಲಯದ ಸಹಯೋಗದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಚಂದ್ರಶೇಖರ ನಾನಿಲ್ ಮಾತನಾಡಿ ಸಂಘಟನೆಯ ಸಮಾಜಮುಖಿ ಕಾರ್ಯಕ್ರಮಗಳಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ವಲಯದ ಅಧ್ಯಕ್ಷ ಸತೀಶ್ ಭಟ್ ಮಾತನಾಡಿ, ಸ್ವಸಹಾಯ ಯ ಸಂಘದ ಬೆಳವಣಿಗೆಗೆ ಬೇಕಾಗುವ ಎಲ್ಲಾ ಸವಲತ್ತು ಹಾಗೂ ಆರ್ಥಿಕ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶೋಭಾ ಸೀತಾರಾಮ್ ಅವರು ವಿವಿಧ ಕರಕುಶಲ ವಸ್ತು ತಯಾರಿ ವಿಧಾನ ಹಾಗೂ ಪರಿಕರಗಳ ಮಾಹಿತಿ ನೀಡಿದರು. ರವಿಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಮಾಧ್ಯಮ ಪ್ರತಿನಿಧಿ ಮೋಹನ್ ರಾವ್, ಶಿವಳ್ಳಿ ಸ್ಪಂದನ ವಲಯದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Kshetra Samachara
13/03/2022 01:32 pm