ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡು ಕೃಷಿ ಮೇಳ ಕೃಷಿಸಿರಿ 2022ರ ಮೂರನೇ ದಿನ ದಿ. ರಾಮಕೃಷ್ಣ ಪೂಂಜ ವೇದಿಕೆಯಲ್ಲಿ ಮನೆಯಲ್ಲಿ ಕೈತೋಟ ಮತ್ತು ಸಾವಯವ ಗೊಬ್ಬರ ತಯಾರಿ ಬಗ್ಗೆ ವಿಚಾರ ಗೋಷ್ಠಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ತುಕಾರಾಮ ಪೂಜಾರಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಮಾತನಾಡಿ ರೈತ ಅತ್ಯಂತ ಹೆಚ್ಚಿನ ಶ್ರಮ ಪಟ್ಟರೂ ಆತನಿಕೆ ಸಿಗುವ ಲಾಭ ಕನಿಷ್ಠವಾಗಿದೆ, ಯಾವುದೇ ರಾಸಾಯನಿಕ ಗೊಬ್ಬರ ಬಳಸುದಕ್ಕಿಂತ ಸಾವಯವ ಗೊಬ್ಬರ ಬಳಕೆ ಸೂಕ್ತ ಎಂದರು.
ಕೃಷಿಮೇಳದ ಪದಾಧಿಕಾರಿ ಸೋಮಪ್ಪ ನಾಯಕ್, ರತ್ನಾಕರ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
13/03/2022 01:19 pm