ವಿಟ್ಲ: ಬಹುಮುಖ ಸಾಧನೆಗಾಗಿ ಚುಕ್ಕಿ ವಿಟ್ಲ ಸಹಿತ ಮೂವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಲಾಸಿರಿ ಕಲಾಚೇತನ ರಾಜ್ಯಪ್ರಶಸ್ತಿ ಪಡೆದ ಬಾಲಪ್ರತಿಭೆಯರಾದ ತನ್ವಿ ಶೆಟ್ಟಿ ಸೂರಂಬೈಲ್, ಚುಕ್ಕಿ ವಿಟ್ಲ, ಚೈತನ್ಯ ಬಿ.ಎನ್. ಉರುವಾಲು ಅವರಿಗೆ ಗದಗನಲ್ಲಿ ಯೋಗಿ ಪುಟ್ಟರಾಜ ಗವಾಯಿ ಅವರ 108ನೇ ಜಯಂತ್ಯುತ್ಸವ ಪ್ರಯುಕ್ತ ಡಾ. ವಿ.ಬಿ.ಹಿರೇಮಠ್ ಮೆಮೋರಿಯಲ್ ಪ್ರತಿಷ್ಠಾನ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶ್ರೀ ಪುಟ್ಟರಾಜ ಕಲಾ ಚೇತನ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ಜನ ಸ್ಪಂದನ ಟ್ರಸ್ಟ್ ಟಿ .ದಾಸರಹಳ್ಳಿ ಬೆಂಗಳೂರು ಬೆಂಗಳೂರಿನಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತನ್ವಿಶೆಟ್ಟಿ ಸೂರಂಬೈಲು, ಚುಕ್ಕಿ ವಿಟ್ಲ, .ಚೈತನ್ಯ ಬಿ, ಎನ್ ಉರುವಾಲು ಅವರನ್ನು ಜನಸ್ಪಂದನ ಕಲಾಸಿರಿ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Kshetra Samachara
12/03/2022 09:12 pm