ಕಾಪು : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾಪು ಜೆಸಿಐ ವತಿಯಿಂದ ಮಲ್ಲಾರು ಕೊಂಬಗುಡ್ಡೆ ಶ್ರೀ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ. ಸುಮಿತ್ರಾ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಅವಿರತ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಸನ್ಮಾಯಿಸಲಾಯಿತು.
ವೈದ್ಯಾಧಿಕಾರಿ ಡಾ. ವಿವೇಕ್, ಜೆಸಿಐ ವಲಯ ಕಾರ್ಯದರ್ಶಿ ಸೌಮ್ಯ ರಾಕೇಶ್, ಕಾಪು ಜೇಸಿಐ ಅಧ್ಯಕ್ಷ ಸುಜಿತ್ ಶೆಟ್ಟಿ, ಮಹಿಳಾ ಜೆಸಿ ಸಂಯೋಜಕಿ ಶ್ರುತಿ ಶೆಟ್ಟಿ, ಪದಾಧಿಕಾರಿಗಳಾದ ಸಾವಿತ್ರಿ ರಮೇಶ್, ಸತ್ಯವತಿ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
09/03/2022 04:29 pm