ಚೇಳೈರು:ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮುಲ್ಕಿ ಮೂಡುಬಿದಿರೆ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಚೇಳೈರು ಗ್ರಾ ಪಂ ವ್ಯಾಪ್ತಿಯ ಮಧ್ಯ ಗ್ರಾಮದ ಪಾರ್ದನಗಾರರು ಮತ್ತು ಸೂಲಗಿತ್ತಿ ಹಾಗೂ ಗಿಡಮೂಲಿಕೆ ಔಷಧಿ ನೀಡುತ್ತಿರುವ ಹಿರಿಯರಾಗಿರುವ ವಿಜಯನಗರ ಶಾರದ ಪೂಜಾರಿಯವರನ್ನು ಗೌರವಿಸಲಾಯಿತು.
ಮಹಿಳಾ ಮೋರ್ಚಾದ ಅಧ್ಯಕ್ಷೆ ಶಶಿಕಲಾ ಶೆಟ್ಟಿ ಬಾಳ,ಮಹಾಶಕ್ತಿಕೇಂದ್ರ ಮಹಿಳಾ ಮೋರ್ಚಾ ಸದಸ್ಯೆ ಪಾರ್ವತಿ,ಚೇಳೈರು ಗ್ರಾ ಪಂ ಅಧ್ಯಕ್ಷೆ ಯಶೋದ, ಸದಸ್ಯೆರೇಖಾ,ಮಂಗಳೂರು ನಗರಾಭಿವೃದ್ಧಿ ಸದಸ್ಯರಾದ ಜಯಾನಂದ, ಜಿಲ್ಲಾ ಕಾರ್ಯ ಕಾರಿಣಿ ಸದಸ್ಯೆ ವಜ್ರಾಕ್ಷಿ ಶೆಟ್ಟಿ,ಮೂಡಬಿದ್ರೆ ಮಂಡಲ ಕಾರ್ಯ ಕಾರಿಣಿ ಸದಸ್ಯರಾದ ಪುಷ್ಪರಾಜ್ ಶೆಟ್ಟಿ,ಚೇಳೈರು ಮಧ್ಯ ಶಕ್ತಿ ಕೇಂದ್ರ ಬಿಜೆಪಿ ಅಧ್ಯಕ್ಷ ಪುಷ್ಪರಾಜ್ ಕುಲಾಲ್ ,ಯುವ ಮೋರ್ಚಾ ಸದಸ್ಯರಾದ ಪವನ್ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
Kshetra Samachara
08/03/2022 10:50 pm