ಕಾಪು : ಪಡುಬಿದ್ರಿ ಬಂಟರ ಸಂಘದ ಮಹಿಳಾ ವಿಭಾಗದ ವತಿಯಿಂದ ಮಂಗಳವಾರ ವಿಶ್ವ ಮಹಿಳಾ ದಿನಾಚರಣೆ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಲಯನ್ಸ್ ಜಿಲ್ಲಾ ಕಾರ್ಡಿನೇಟರ್ ಶ್ರೀಮತಿ ರಂಜನ ಶ್ರೀಧರ್ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭ ದಂತವೈದ್ಯೆ ಡಾಕ್ಟರ್ ಸೌಮ್ಯಲತಾ ಕೆ ಶೆಟ್ಟಿ, ರಾಷ್ಟ್ರೀಯ ಪವರ್ ಲಿಫ್ಟರ್ ಕುಮಾರಿ ಸೀಯ ಶೆಟ್ಟಿ, ಡಾ. ಸ್ಪೂರ್ತಿ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪಡುಬಿದ್ರಿ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ ಆರ್ ಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Kshetra Samachara
08/03/2022 10:08 pm