ಮುಲ್ಕಿ: ಮುಲ್ಕಿ-ಮೂಡಬಿದ್ರೆ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಕ್ಷೇತ್ರ ಸಮಿತಿಯಿಂದ ಟೈಲರ್ಸ್ ಸಂಸ್ಥಾಪನಾ ದಿನಾಚರಣೆ ಹಾಗೂ ಅಶಕ್ತರಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಮುಲ್ಕಿ ಬಿಲ್ಲವ ಸಂಘದಲ್ಲಿ ಜರಗಿತು.
ಬಾಜಪ ಮೂಡಬಿದ್ರೆ ಮಂಡಲ ಅಧ್ಯಕ್ಷ ಸುನೀಲ್ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆ ಎಸ್ ಟಿ ಎ ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಸಮಿತಿ ಅಧ್ಯಕ್ಷ ಅಣ್ಣಪ್ಪರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ ಎಸ್ ಟಿ ಎ ರಾಜ್ಯ ಅಧ್ಯಕ್ಷ ನಾರಾಯಣ ಬಿ ಎ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಹಿಲ್ಡಾ ಡಿ ಸೋಜಾ, ಮೂಲ್ಕಿ ನ ಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಅಮೀನ್ , ಕೆ ಎಸ್ ಟಿ ಎ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ದಾಮೋದರ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಸಕ ಉಮನಾಥ ಕೋಟ್ಯಾನ್ ಅವರು ನೀಡಿದ 8 ಹೊಲಿಗೆ ಯಂತ್ರಗಳನ್ನು ನಾಲ್ಕು ವಲಯ ಸಮಿತಿಯ ಅಶಕ್ತ ಟೈಲರ್ ಗಳಿಗೆ ಹಸ್ತಾಂತರಿಸಲಾಯಿತು.
ಹಿರಿಯ ಟೈಲರ್ ಸದಸ್ಯರುಗಳಾದ ಶಂಕರ್ ಬಿ ಕೋಟ್ಯಾನ್ ಕಿನ್ನಿಗೋಳಿ , ಸದಾನಂದ ಪೂಜಾರಿ ಮೂಡಬಿದ್ರೆ, ಲಕ್ಷ್ಮಣ ಶೆಟ್ಟಿಗಾರ್ ಮೂಲ್ಕಿ, ಯಶೋದಾ ಆಚಾರ್ಯ ಹಳೆಯಂಗಡಿ ಹಾಗೂ ಉದಯ ಅಮೀನ್ ಮಟ್ಟು ಅವರನ್ನು ಗೌರವಿಸಲಾಯಿತು.
Kshetra Samachara
08/03/2022 11:01 am