ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: 'ಕನ್ನಡ ಶಾಲೆಗಳ ಉಳುವಿನ ಜೊತೆಗೆ ಯುವ ಸಾಹಿತಿ, ಓದುಗರಿಗೆ ಪ್ರೋತ್ಸಾಹ ಅಗತ್ಯ'

ಮುಲ್ಕಿ: ಕನ್ನಡ ಭಾಷೆಯ ಶುದ್ಧವಾದ ಬಳಕೆ ಹಾಗೂ ಉಳಿಯುವಿಕೆಯಲ್ಲಿ ಯಕ್ಷಗಾನದ ಪಾತ್ರ ಮಹತ್ವದಾಗಿದ್ದು, ಮಕ್ಕಳನ್ನು ಓದುವಿಕೆಗೆ ಉತ್ತೇಜಿಸುವ ಅಗತ್ಯವಿದೆ ಎಂದು ಸಾಹಿತಿ, ಕಲಾವಿದ ತಾರಾನಾಥ ವರ್ಕಾಡಿ ಹೇಳಿದ್ದಾರೆ.

ಕಟೀಲು ದೇವಳ ಸರಸ್ವತೀ ಸದನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮುಲ್ಕಿ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಕಸಾಪ ಮುಲ್ಕಿ ತಾಲೂಕು ಘಟಕವನ್ನು ಉದ್ಘಾಟಿಸಿ, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅವರು, ಜಿಲ್ಲೆಯಾದ್ಯಂತ ಸಾಹಿತ್ಯ ಚಟುವಟಿಕೆಗಳನ್ನು ಆಯೋಜಿಸುತ್ತ, ಸದಸ್ಯರನ್ನು ತೊಡಗಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಕನ್ನಡ ಶಾಲೆಗಳನ್ನು ಉಳಿಸುವ ಜೊತೆಗೆ ಯುವ ಸಾಹಿತಿಗಳು, ಓದುಗರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಲಿದ್ದೇವೆ ಎಂದು ಹೇಳಿದರು.

ಆಶೀರ್ವಚನ ನೀಡಿದ ಕಟೀಲು ದೇವಳದ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣರು ಮಾತನಾಡಿ, ಪ್ರೀತಿ ಮಾಡಬಾರದು. ಮಾಡಿದರೆ ಯಾರಿಗೂ ಹೆದರಬಾರದು. ಇದು ವೇದವೇ ಹೇಳಿದ ಮಾತಿದು ಎಂದು ಸಿನಿಮಾ ಪದ್ಯ ಬರೆದವರು ಸಾಹಿತಿಯಾಗಿ ಪ್ರಸಿದ್ಧರಾಗುತ್ತಾರೆ. ಪ್ರೀತಿ ಮಾಡಿದರೆ ಯಾರಿಗೂ ಹೆದರಬಾರದು ಎಂದು ಯಾವ ವೇದವೂ ಹೇಳಿಲ್ಲ. ಛಂದೋಬದ್ಧವಾಗಿ ಬರೆದ ಅನೇಕ ಸಾಹಿತಿಗಳು, ಯಕ್ಷಗಾನ ಪ್ರಸಂಗಕರ್ತರಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧಿ ಸಿಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಉಮೇಶ್ ರಾವ್ ಎಕ್ಕಾರು ರನ್ನು ಸನ್ಮಾನಿಸಲಾಯಿತು. ಮುಲ್ಕಿ ತಾಲೂಕು ಘಟಕದ ನೂತನ ಅಧ್ಯಕ್ಷೆ ಗಾಯತ್ರೀ ಎಸ್. ಉಡುಪ, ಕಟೀಲು ದೇವಳದ ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಕಸಾಪದ ಜಿಲ್ಲಾ ಕಾರ್ಯದರ್ಶಿ ವಿನಯ ಆಚಾರ್ಯ, ಡಾ. ಸುನೀತಾ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

07/03/2022 09:52 am

Cinque Terre

10.58 K

Cinque Terre

0

ಸಂಬಂಧಿತ ಸುದ್ದಿ