ಉಡುಪಿ: ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಇಂದು ನ್ಯಾಯಾಲಯದ ಆವರಣದಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ನಡೆಯಿತು.
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ, ಪಾವಂಜೆಯವರಿಂದ ಈ ಕಥಾಪ್ರಸಂಗ ನಡೆಯಿತು.
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ನಡೆದ ಯಕ್ಷಗಾನ ಪ್ರಸಂಗವು ವಕೀಲರು ಮತ್ತು ಉಡುಪಿ ನಾಗರಿಕರನ್ನು ಸೂಜಿಗಲ್ಲಿನಂತೆ ಸೆಳೆಯಿತು. ಕ್ರಿಯಾಶೀಲ ವಕೀಲರ ಸಂಘವು ವಕೀಲರಿಗಾಗಿ ಮತ್ತು ಉಡುಪಿಯ ಯಕ್ಷಪ್ರೇಮಿಗಳಿಗಾಗಿ ಈ ಕಾರ್ಯಕ್ರಮವನ್ನು ಇಂದು ಸಂಜೆ ಹಮ್ಮಿಕೊಂಡಿತ್ತು. ವಕೀಲರು, ಅವರ ಕುಟುಂಬದ ಸದಸ್ಯರು ಮತ್ತು ಅಬಾಲ ವೃದ್ಧರಾದಿಯಾಗಿ ನೂರಾರು ಯಕ್ಷ ಪ್ರೇಮಿಗಳು ಯಕ್ಷಗಾನವನ್ನು ಕಣ್ತುಂಬಿಕೊಂಡರು.
Kshetra Samachara
06/03/2022 06:31 pm