ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಫೆ.11 ರಿಂದ ಉಡುಪಿಯಲ್ಲಿ ಮೂರು ದಿನಗಳ 'ರಂಗೋತ್ಸವ'

ಉಡುಪಿ: ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಯಲ್ಲಿ ಒಂದಾದ ರಂಗಭೂಮಿ ಉಡುಪಿ ಇದೇ ಫೆ.11 ರಿಂದ 3 ದಿನಗಳ 'ರಂಗೋತ್ಸವ' ಕಾರ್ಯಕ್ರಮವನ್ನು ಎಂ.ಜಿ.ಎಂ. ಕಾಲೇಜಿನ ಮುದ್ದಣ ಹಾಗೂ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡಿದೆ.

ಶ್ರೀಕ್ಷೇತ್ರ ಹೊರನಾಡು ಇದರ ಧರ್ಮದರ್ಶಿ ಭೀಮೇಶ್ವರ ಜೋಶಿ 3 ದಿನಗಳ 'ರಂಗೋತ್ಸವ'ವನ್ನು ಉದ್ಘಾಟಿಸಲಿದ್ದಾರೆ. ಅದೇ ದಿನ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ, ಕನ್ನಡ ಮತ್ತು ಸಂಸ್ಕೃತಿ ಬೆಂಗಳೂರು, ಹಾಗೂ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಉಡುಪಿ ಘಟಕದ ಸಹಯೋಗದೊಂದಿಗೆ ನಾಡಿನ ಜಾನಪದ ಕಲೆ-ಸಂಸ್ಕೃತಿಯ ಅನಾವರಣದೊಂದಿಗೆ “ಜಾನಪದ ವೈಭವ - 2022 " ಹಾಗೂ ಡಾ| ತಲ್ಲೂರು ಶಿವರಾಮ ಶೆಟ್ಟಿ ವಿರಚಿತ “ಧರ್ಮಂ ಚರ - ನಿತ್ಯ ಸತ್ಯಗಳು" ಕೃತಿಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಡುಗಡೆ ಮಾಡಲಿದ್ದಾರೆ.

ಯಕ್ಷಗಾನ ಕೇಂದ್ರ ಉಡುಪಿಯ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ ಇವರನ್ನು ಈ ಜಾನಪದ ವೈಭವದಂದು ಸನ್ಮಾನಿಸಲಾಗುವುದು.ಫೆ.12 ಶನಿವಾರ ರಂಗಭೂಮಿ ಆಯೋಜಿಸಿದ 42ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

09/02/2022 04:57 pm

Cinque Terre

3.79 K

Cinque Terre

0

ಸಂಬಂಧಿತ ಸುದ್ದಿ