ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ವಿಭಿನ್ನ ರೀತಿ ರೋಸ್ ಡೇ: ವೃದ್ಧರಿಗೆ ರೋಸ್ ನೀಡಿ ವಿಷ್...!

ಹುಬ್ಬಳ್ಳಿ: ಫೆಬ್ರವರಿ ತಿಂಗಳು ಆರಂಭವಾಯ್ತು ಅಂದರೆ ಸಾಕು ಪ್ರೇಮಿಗಳ ಮನಸ್ಸಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಪ್ರಪೋಸ್ ಡೇ, ರೋಸ್ ಡೇ ಹೀಗೆ ಹಲವಾರು ದಿನಗಳ ಆಚರಣೆಯನ್ನು ಆಚರಿಸುತ್ತಾರೆ. ಆದರೆ ಹುಬ್ಬಳ್ಳಿಯಲ್ಲೊಂದು ಫೌಂಡೇಶನ್ ಪ್ರೇಮಿಗಳ ದಿನವನ್ನು ವಿನೂತನ ಹಾಗೂ ವಿಭಿನ್ನವಾಗಿ ಆಚರಣೆ ಮಾಡಲು ಮುಂದಾಗಿದೆ.

ಹೌದು.. ಹುಬ್ಬಳ್ಳಿಯಲ್ಲಿ ವಿಭಿನ್ನ ಹಾಗೂ ವಿನೂತನವಾಗಿ ರೋಸ್ ಡೇ ಯನ್ನು ಅಟೋರಕ್ಷಾ ಫೌಂಡೇಶನ್ ಆಚರಿಸಿದೆ. ಕೇವಲ ಪ್ರೇಮಿಗಳು ಆಚರಿಸುವಂತ ಪ್ರೇಮಿಗಳ ದಿನಾಚರಣೆ ಮೊದಲ ದಿನವಾದ ರೋಸ್ ಡೇ ಯನ್ನು ಅಟೋರಕ್ಷಾ ಫೌಂಡೇಶನ್ ವಿಭಿನ್ನವಾಗಿ ಆಚರಿಸಿತು.

ಅಟೋರಕ್ಷಾ ಫೌಂಡೇಶನ್ ವತಿಯಿಂದ ಈ ಫೆಬ್ರುವರಿಯ ಪ್ರತಿಯೊಂದು ದಿನವನ್ನೂ ವಿಶೇಷ ಮತ್ತು ವಿಶಿಷ್ಟವಾಗಿ ಆಚರಣೆ ಮಾಡಲು ನಿರ್ಧರಿಸಿದ್ದು,‌ಇಂದು ಮೊದಲ ದಿನವನ್ನು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿಯ ವೃದ್ಧರಿಗೆ ಗುಲಾಬಿ ಹೂವು ನೀಡುವ ಮೂಲಕ ರೋಜ್ ಡೇ ದಿನವನ್ನು ಸಂಭ್ರಮದಿಂದ ಆಚರಿಸಿದರು.

Edited By : Nagesh Gaonkar
Kshetra Samachara

Kshetra Samachara

08/02/2022 09:35 pm

Cinque Terre

8.12 K

Cinque Terre

0

ಸಂಬಂಧಿತ ಸುದ್ದಿ