ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಶ್ರೀ ಕುಮಾರಮಂಗಿಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ಪ್ರಾತಃಕಾಲ ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ ಹಾಗೂ ಕೊಲಕಾಡಿ ವಾದಿರಾಜ ಉಪಾಧ್ಯಾಯರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ತತ್ವ ಹೋಮ, ತತ್ವ ಕಲಶ, ರಕ್ತೇಶ್ವರಿ ಪ್ರತಿಷ್ಠೆ, ಶ್ರೀ ನಾಗ ದೇವರ ಪ್ರತಿಷ್ಠೆ, ಪವಮಾನ ಸೂಕ್ತ ಹೋಮ ನಡೆಯಿತು.
ಬೆಳಿಗ್ಗೆ 11 ಗಂಟೆಗೆ ವೇದಮೂರ್ತಿ ಶ್ರೀ ಸಗ್ರಿ ಗೋಪಾಲಕೃಷ್ಣ ಸಾಮಗ ರಿಂದ ನಾಗದರ್ಶನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಧಾರ್ಮಿಕ ಪರಿಷತ್ ಸದಸ್ಯ ಗಿರಿ ಪ್ರಕಾಶ್ ತಂತ್ರಿ ಪೊಳಲಿ, ವಾಸುದೇವ ಉಡುಪ, ಶ್ರೀಕಾಂತ್ ಭಟ್ ಕೊಲಕಾಡಿ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಗೋಪಿನಾಥ ಪಡಂಗ,ಸಮಿತಿಯ ಚಂದ್ರಶೇಖರ ಮಯ್ಯ, ಜಯಕುಮಾರ್ ಮಯ್ಯ ಶಿವಪ್ರಸಾದ್ ಮಯ್ಯ, ಸತೀಶ್ ಆಚಾರ್ಯ, ರಂಜನ್ ಶೆಟ್ಟಿ ಕೆಂಪುಗುಡ್ಡೆ, ಮಾಧವ ಪೂಜಾರಿ ಕಿಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಸಾಯಂಕಾಲ ಬ್ರಹ್ಮಕಲಶ ಮಂಡಲ ರಚನೆ, ದುರ್ಗಾ ನಮಸ್ಕಾರ ಪೂಜೆ, ಆಶ್ಲೇಷಾ ಬಲಿ ನಡೆಯಿತು.
Kshetra Samachara
06/02/2022 09:26 pm