ವಿಟ್ಲ: ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡ ಕೇಪು ಗ್ರಾಮದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅವರ ಮನೆಗೆ ಪುತ್ತೂರು ಮತ್ತು ಬಂಟ್ವಾಳ ಶಾಸಕರು ಭೇಟಿ ನೀಡಿ ಸನ್ಮಾನಿಸಿದರು.
ಈ ಸಂದರ್ಭ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಮಹಾಲಿಂಗ ನಾಯ್ಕ ಅವರು ಸುರಂಗದ ಮೂಲಕ ಜೀವಜಲವನ್ನು ತರಿಸಿ ಕೃಷಿ ಕ್ರಾಂತಿಯನ್ನೇ ಮಾಡಿದ್ದಾರೆ. ಅವರಿಗೆ ದೊರೆತ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯು ಸಾವಿರಾರು ರೈತರಿಗೆ ಪ್ರೇರಣೆ ಎಂದು ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ನಾವು ಕೃಷಿಕರಾಗಿದ್ದರೂ ಮಹಾಲಿಂಗ ನಾಯ್ಕ ಅವರಿಂದ ಬಹಳಷ್ಟು ಕಲಿಯುವುದಿದೆ. ಈ ಸಾಹಸಿ ತನಗೆ ಬೇಕಾದ ನೀರನ್ನು ತಾನೇ ಅನ್ವೇಷಿಸಿ, ಇಡೀ ಜಗತ್ತಿಗೇ ಮಾದರಿಯಾಗಿದ್ದಾರೆ ಎಂದರು.
ಕೇಪು ಗ್ರಾಪಂ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ, ಉಪಾಧ್ಯಕ್ಷ ರಾಘವ ಸಾರಡ್ಕ, ಸದಸ್ಯರಾದ ಪುರುಷೋತ್ತಮ ಕಲ್ಲಂಗಳ, ಜಗಜೀವನ್ ರಾಮ್ ಶೆಟ್ಟ, ಜಯಶೀಲ ಅಮೈ, ನಿಕಟಪೂರ್ವ ಅಧ್ಯಕ್ಷ ತಾರಾನಾಥ ಆಳ್ವ, ಜಿಪಂ ನಿಕಟಪೂರ್ವ ಸದಸ್ಯೆ ಜಯಶ್ರೀ ಕೋಡಂದೂರು, ಆರ್.ಸಿ. ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/01/2022 07:00 pm