ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಒಡೆಯರ ಬೆಟ್ಟು ಶ್ರೀ ಬೊಬ್ಬರ್ಯ ದೈವಸ್ಥಾನದ ವರ್ಷಾವಧಿ ನೇಮೋತ್ಸವ ಸಂಭ್ರಮ

ಮುಲ್ಕಿ: ಮುಲ್ಕಿ ಸಮೀಪದ ಒಡೆಯರ ಬೆಟ್ಟು ಶ್ರೀ ಬೊಬ್ಬರ್ಯ ದೈವಸ್ಥಾನದ ವರ್ಷಾವಧಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.

ಜ.25 ಪ್ರಾತಃಕಾಲ ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಮಾತನಾಡಿದ ಅವರು, ಕೊರೊನಾದಿಂದ ಲೋಕವೇ ತಲ್ಲಣಗೊಂಡಿದ್ದು, ಅನೇಕರು ಸಂಕಷ್ಟಕ್ಕೀಡಾಗಿದ್ದಾರೆ. ದೈವ-ದೇವರುಗಳ ಕೃಪಾಕಟಾಕ್ಷದಿಂದ ಮಹಾಮಾರಿ ದೂರವಾಗಿ ಶಾಂತಿ ಸೌಹಾರ್ದತೆ ನೆಲೆಸಲಿ ಎಂದರು.

ಬಳಿಕ (ಜ.25ರಂದು 10 ಗಂಟೆಗೆ) ನವಕ ಪ್ರಧಾನ ಹೋಮ ಕಲಶಾಭಿಷೇಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ 5 ಗಂಟೆಗೆ ಭಂಡಾರ ಇಳಿದು ಧ್ವಜಾರೋಹಣ ನಡೆಯಿತು. ರಾತ್ರಿ ಶ್ರೀ ಬೊಬ್ಬರ್ಯ ದೈವದ ನೇಮೋತ್ಸವ ವಿಜೃಂಭಣೆಯಿಂದ ನಡೆದು ಪ್ರಸಾದ ವಿತರಿಸಲಾಯಿತು.

ಈ ಸಂದರ್ಭ ಊರಿನ ಗುರಿಕಾರರು ಅಧ್ಯಕ್ಷರು ಮತ್ತು ಸದಸ್ಯರು ಒಡೆಯರ ಬೆಟ್ಟು ಮೊಗವೀರ ಸಭಾ , ಮೊಗವೀರ ಮಹಿಳಾ ಸಭಾ, ಮುಂಬೈ ಮೊಗವೀರ ಸಭಾ ದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/01/2022 09:46 am

Cinque Terre

3.28 K

Cinque Terre

0

ಸಂಬಂಧಿತ ಸುದ್ದಿ