ಪುತ್ತೂರು: ಬುಲೆಟ್ ಗಿಂತ ಬ್ಯಾಲೆಟ್ ಪೇಪರ್ ಶಕ್ತಿಶಾಲಿ. ಮತದಾನ ಸಂದರ್ಭ ಯಾವುದೇ ರಾಜಕೀಯ ವ್ಯಕ್ತಿಗಳ ಆಮಿಷ, ಹಸ್ತಕ್ಷೇಪಕ್ಕೆ ಒಳಗಾಗದೆ ಮತ ಚಲಾವಣೆ ಮಾಡಬೇಕು. ಮತದಾನ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿದ್ದು,ಮತದಾನ ಮಾಡದಿದ್ದರೆ ಅದು ವ್ಯಕ್ತಿಗೆ ನಷ್ಟವಲ್ಲ, ದೇಶಕ್ಕೇ ನಷ್ಟ ಎಂದು ಪುತ್ತೂರು ಜೆಎಂಎಫ್ ಸಿ ಪ್ರಿನ್ಸಿಪಾಲ್ ಸಿವಿಲ್ ನ್ಯಾಯಾಧೀಶ ಜಿ.ಅರುಣ್ ಕುಮಾರ್ ಹೇಳಿದರು.
ಪುತ್ತೂರು ತಾಲ್ಲೂಕು ಆಡಳಿತ ಸೌಧದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿಇಂದು ನಡೆದ 12ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮತದಾರರ ನೋಂದಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಮಾತನಾಡಿ, ನಾಗರಿಕ ಸಮಾಜದಲ್ಲಿ ಅತಿ ಶಾಂತಿಯುತವಾಗಿ ಶಿಸ್ತಿನಿಂದ ನಮ್ಮನ್ನು ಆಳುವವರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುವುದಕ್ಕೆ ಭಾರತ ಮಾದರಿಯಾಗಿದ್ದು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಅಧಿಕಾರ ಎಂದರು.
Kshetra Samachara
25/01/2022 05:09 pm