ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದೆಹಲಿ ಗಣರಾಜ್ಯೋತ್ಸವದಲ್ಲಿ ತುಳುನಾಡ ಕಂಗೀಲು ನೃತ್ಯ ಸೊಬಗು!

ವರದಿ: ರಹೀಂ ಉಜಿರೆ

ಉಡುಪಿ: ಕರಾವಳಿಯ ಅಪರೂಪದ ಜನಪದ ಕಲೆ ರಾಷ್ಟ್ರಮಟ್ಟದಲ್ಲಿ ಮಿಂಚಲಿದೆ. ಜ. 26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಶೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಕರಾವಳಿಯ ಕಂಗೀಲು ನೃತ್ಶ ಪ್ರದರ್ಶನಗೊಳ್ಳಲಿದೆ!ಉಡುಪಿ ಎಂಜಿಎಂ ಕಾಲೇಜು ಹಾಗೂ ಪೂರ್ಣಪ್ರಜ್ಞ ಕಾಲೇಜಿನ  9 ವಿದ್ಯಾರ್ಥಿನಿಯರು ಮತ್ತು 5 ವಿದ್ಶಾರ್ಥಿಗಳನ್ನೊಳಗೊಂಡ ತಂಡ ಪ್ರತಿಷ್ಠಿತ ರಾಜಪಥದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಗೀಲು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಇದು ಕರಾವಳಿಯ ಮಣ್ಣಿನ ಕಲೆಗೆ ಸಂದ ಮಹಾ ಗೌರವವೇ ಸರಿ.

ಈ ವಿದ್ಶಾರ್ಥಿಗಳ ತಂಡ 'ಉಡುಪಿ ಬೀಟ್ಸ್ ' ಲಾಂಛನದಡಿ ತುಳುನಾಡಿನ ಸೊಬಗಿನ ನೃತ್ಶ ಪ್ರಕಾರವನ್ನು ರಾಷ್ಟ್ರ ರಾಜಧಾನಿಯಲ್ಲಿ ಪ್ರದರ್ಶಿಸಲಿದ್ದಾರೆ. ಆಯ್ಕೆಯ ವಲಯ ಮಟ್ಟದ ಮೊದಲ ಪ್ರಕ್ರಿಯೆ ಡಿ. 11ರಂದು ಬೆಂಗಳೂರಿನಲ್ಲಿ ನಡೆದಿದ್ದು, ಕಿರಣ್ ಪಡುಬಿದ್ರಿ ತರಬೇತಿಯೊಂದಿಗೆ  ಈ ಸ್ಪರ್ಧೆಯಲ್ಲಿ ಭಾಗವಹಿಸಿ, ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು.

ಡಿ.18ರಂದು ದೆಹಲಿಯಲ್ಲಿ ನಡೆದ 2ನೇ ಹಂತದ ಗ್ರ್ಯಾಂಡ್ ಫೈನಲ್ ಹಣಾಹಣಿಯಲ್ಲಿ 104 ತಂಡಗಳು ಭಾಗವಹಿಸಿದ್ದು, ಇದರಲ್ಲಿ ಉಡುಪಿ ಬೀಟ್ಸ್ ತಂಡವು ಮೊದಲ 4ನೇ ತಂಡವಾಗಿ ಆಯ್ಕೆಯಾಗಿದೆ. ಅಂತಿಮ ಆಯ್ಕೆ ಬಳಿಕ ತಂಡದ ಎಲ್ಲ ಸದಸ್ಯರು ಜ. 7ರಂದು ದೆಹಲಿಗೆ ತೆರಳಿದ್ದು, ಇದೀಗ ಅಂತಿಮ ಪ್ರದರ್ಶನದ ತಾಲೀಮಿನಲ್ಲಿ ಪ್ರತಿನಿತ್ಶ ಭಾಗವಹಿಸುತ್ತಿದ್ದಾರೆ.

Edited By : Manjunath H D
PublicNext

PublicNext

24/01/2022 03:56 pm

Cinque Terre

39.86 K

Cinque Terre

0