ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವೀಕೆಂಡ್ ಕರ್ಫ್ಯೂನಿಂದ ಹಿಂದಡಿ; ʼಸೈಂಟ್ ಮೇರಿಸ್ʼ ಗೆ ಪ್ರವಾಸಿಗರ ದಾಂಗುಡಿ!

ಮಲ್ಪೆ: ಮಲ್ಪೆ, ಪಡುಕರೆ, ಕಾಪು, ಮರವಂತೆ ಬೀಚ್ ಗಳಲ್ಲಿ ವಾರಾಂತ್ಯದಲ್ಲಿ ಜನ ಸಾಗರವೇ ಇರುತ್ತಿತ್ತು. ಜಿಲ್ಲೆಯ ಜನ ಮಾತ್ರವಲ್ಲ, ರಾಜ್ಯದ ಮೂಲೆ ಮೂಲೆಗಳಿಂದಲೂ ಸಾವಿರಾರು ಮಂದಿ ಜಿಲ್ಲೆಯ ಬೀಚ್‌ಗಳಿಗೆ ದೌಡಾಯಿಸುತ್ತಿದ್ದರು. ಸಮುದ್ರದಲೆಗಳ ಜೊತೆಗೆ ಆಟವಾಡಿ, ಸೂರ್ಯಾಸ್ತವನ್ನು ಕಣ್ಣು ತುಂಬಿಸಿಕೊಂಡು ಮನೆ ಸೇರುತ್ತಿದ್ದರು.

ಆದರೆ, ಕಳೆದೆರಡು ವಾರಗಳಿಂದ ವೀಕೆಂಡ್ ಕರ್ಫ್ಯೂ ಇದ್ದ ಕಾರಣ ಬೀಚ್ ಗಳು ಬಿಕೋ ಎನ್ನುತ್ತಿದ್ದವು. ಇಂದಿನಿಂದ ವೀಕೆಂಡ್ ಕರ್ಫ್ಯೂ ಹಿಂಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಹಾಟ್ ಸ್ಪಾಟ್ ಎನಿಸಿರುವ ಮಲ್ಪೆಯ ಸೈಂಟ್ ಮೇರಿಸ್ ಗೆ ಪ್ರವಾಸಿಗರು ಮುಗಿಬೀಳುತ್ತಿರುವ ದೃಶ್ಯ ಕಂಡು ಬಂತು. ನೆರೆ ಜಿಲ್ಲೆಗಳ ಮತ್ತು ಹೊರ ರಾಜ್ಯದ ಜನರು ಬೆಳಿಗ್ಗೆಯೇ ಸೈಂಟ್ ಮೇರಿಸ್ ಗೆ ದಾಂಗುಡಿ ಇಟ್ಟಿದ್ದಾರೆ. ಹೀಗಾಗಿ ಸೈಂಟ್ ಮೇರಿಸ್ ಗೆ ಹೋಗುವ ಬೋಟ್ ಗಳೆಲ್ಲ ಪ್ರವಾಸಿಗರಿಂದ ತುಂಬಿವೆ.

Edited By : Nagesh Gaonkar
Kshetra Samachara

Kshetra Samachara

22/01/2022 03:08 pm

Cinque Terre

5.69 K

Cinque Terre

0

ಸಂಬಂಧಿತ ಸುದ್ದಿ