ಮೂಡುಬಿದಿರೆ: "ಬೇಟಿ ಬಚಾವೋ, ಬೇಟಿ ಪಡಾವೋ" ಪರಿಕಲ್ಪನೆಯಡಿ ಬಿಜೆಪಿ ಮೂಲ್ಕಿ-ಮೂಡುಬಿದಿರೆ ಮಂಡಲದ ಹಿರಿಯ ನಾಗರಿಕರ ಪ್ರಕೋಷ್ಠದ ವತಿಯಿಂದ ʼರಾಷ್ಟ್ರೀಯ ಹೆಣ್ಣು ಮಗುವಿನ ದಿನʼ ಜ. 24ರಂದು ಬೆಳುವಾಯಿಯ ಎಸ್.ಬಿ. ಪಾರ್ಟಿ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಹಿರಿಯ ನಾಗರಿಕರ ಪ್ರಕೋಷ್ಠ ಸಂಚಾಲಕ ಸುರೇಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ 12 ಮಂದಿ ಬಡ ಹೆಣ್ಣುಮಕ್ಕಳಿಗೆ ತಲಾ 1000 ರೂ. ಮೌಲ್ಯದ ಸ್ಥಿರ ಠೇವಣಿ ಸರ್ಟಿಫಿಕೇಟ್ (10 ವರ್ಷ ಅವಧಿ) ನೀಡಲಾಗುವುದು. ಅನಾರೋಗ್ಯ ಪೀಡಿತ ಹುಡುಗಿಯೊಬ್ಬಳಿಗೆ ಆರ್ಥಿಕ ನೆರವು ಹಸ್ತಾಂತರಿಸಲಾಗುವುದು. ರಾಷ್ಟ್ರಮಟ್ಟದ ಸಾಧಕ ಕ್ರೀಡಾಪಟು ಅಮ್ರೀನ್ ಅವರಿಗೆ ಸನ್ಮಾನ ನಡೆಯಲಿದೆ. `ಹೆಣ್ಣು ಮಗುವಿನ ಉಳಿವು' ಪ್ರಸ್ತುತ ಕಾಲದ ಅವಶ್ಯಕತೆ ಎಂಬ ವಿಷಯದ ಕುರಿತು ಕಾರ್ಕಳ ಎಸ್.ವಿ.ಟಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಉಪನ್ಯಾಸ ನೀಡಲಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದು, ಹಿರಿಯ ನಾಗರಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಹಿರಿಯ ನಾಗರಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ನಾರಾಯಣ ಗಟ್ಟಿ, ಬೆಳುವಾಯಿ ಗ್ರಾಪಂ ಅಧ್ಯಕ್ಷೆ ಸುಶೀಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಪ್ರಕೋಷ್ಠ ಸದಸ್ಯ ರಾಘವ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Kshetra Samachara
22/01/2022 01:18 pm