ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪ್ರಕಟನೆಯ ಮೂರು ಯಕ್ಷಗಾನ ಕೃತಿಗಳು ಜ.22ರಂದು ಬೆಳಗ್ಗೆ 10.30ಕ್ಕೆ ಸುರತ್ಕಲ್ ನ ಗೋವಿಂದದಾಸ್ ಕಾಲೇಜಿನಲ್ಲಿ ಅನಾವರಣಗೊಳ್ಳಲಿದೆ.
ಮಂಗಳೂರು ವಿವಿಯ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಪುಸ್ತಕ ಅನಾವರಣಗೊಳಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮಟಾ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭ ಕದ್ರಿ ನವನೀತ ಶೆಟ್ಟಿಯವರು ಸಂಪಾದಿಸಿದ ತುಳು ಯಕ್ಷಗಾನ ಪ್ರಸಂಗ ಸಂಪುಟ, ಡಾ.ರಮಾನಂದ ಬನಾರಿಯವರು ಬರೆದ ಯಕ್ಷಗಾನ ಸಂವಾದ ಭೂಮಿಕೆ ಹಾಗೂ ಪ್ರೊ.ಎಂ.ಎ.ಹೆಗಡೆ ಹಾಗೂ ಯೋಗೀಶ್ ರಾವ್ ಚಿಗುರುಪಾದೆ ಸಂಪಾದಿಸಿದ ಪಾರ್ತಿಸುಬ್ಬ - ಬದುಕು ಬರಹ ಕೃತಿಗಳು ಬಿಡುಗಡೆಯಾಗಲಿದೆ. ಪೊಳಲಿ ನಿತ್ಯಾನಂದ ಕಾರಂತ, ಸದಾಶಿವ ಆಳ್ವ ತಲಪಾಡಿ, ಡಾ.ಸುಧಾರಾಣಿ ಕೃತಿ ಪರಿಚಯ ಮಾಡಲಿದ್ದಾರೆ.
Kshetra Samachara
20/01/2022 09:09 pm