ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ಸಾವರ್ಕರ್ ಸಾಹಿತ್ಯ ಸಂಭ್ರಮ ,ಸಂವಾದ

ಉಡುಪಿ: ಸ್ವಾಮಿ ವಿವೇಕಾನಂದ ಜಯಂತಿಯ ಹಿನ್ನೆಲೆಯಲ್ಲಿ ಉಡುಪಿಯ ಟೌನ್ ಹಾಲ್ ನಲ್ಲಿ ಸಾವರ್ಕರ್ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು. ಕೂರ್ಮ ಬಳಗ ಕಾರ್ಯಕ್ರಮವನ್ನು ಆಯೋಜಿಸಿದ್ದು, ವೀರ ದಾಮೋದರ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಡಾ. ಸಂದೀಪ್ ಬಾಲಕೃಷ್ಣನ್ ,ಸಾವರ್ಕರ್ ಜೀವನ ಮತ್ತು ಸಾಧನೆ ,ಅವರ ಸ್ವಾತಂತ್ರ ಹೋರಾಟ, ಅಂಡಮಾನ್ ಜೈಲ್ ನಲ್ಲಿ ಅನುಭವಿಸಿದ ಕಷ್ಟ ಮತ್ತು ಸದ್ಯ ಚರ್ಚೆಯ ವಸ್ತುವಾಗಿರುವ ಸಾವರ್ಕರ್ ಬಗ್ಗೆ ಸಂವಾದ ನಡೆಸಿದರು. ಸಾವರ್ಕರ್ ಬಗೆಗಿನ ಜನರ ಪ್ರಶ್ನೆಗಳಿಗೆ ಉತ್ತರಿಸಿದರು. ಉಡುಪಿಯ ಕಲಾವಿದ ಮಹೇಶ್ ಮಲ್ಪೆ ರೂಬಿಕ್ಸ್ ಕ್ಯೂಬ್ ಮೂಲಕ ಸಾವರ್ಕರ್ ಅವರ ಕಲಾಕೃತಿಯನ್ನು ರಚನೆ ಮಾಡಿದರು. ಸಾವರ್ಕರ್ ಕುರಿತಾದ ಸಂಗೀತ ಮತ್ತು ದೇಶಭಕ್ತಿಯ ನೃತ್ಯ ಕಾರ್ಯಕ್ರಮ ಸಾಹಿತ್ಯ ಕಾರ್ಯಕ್ರಮದ ನಡುವೆ ನೆರವೇರಿತು. ಜನಪ್ರತಿನಿಧಿಗಳು ಸಾವರ್ಕರ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು.

Edited By : Manjunath H D
Kshetra Samachara

Kshetra Samachara

13/01/2022 01:48 pm

Cinque Terre

28.04 K

Cinque Terre

0

ಸಂಬಂಧಿತ ಸುದ್ದಿ