ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕೃಷ್ಣಮಠದ ರಾಜಾಂಗಣದಲ್ಲಿ ಮೂಡಿ ಬಂತು ಅಪರೂಪದ ಯಕ್ಷಗಾನ ಗೊಂಬೆಯಾಟ ಪ್ರದರ್ಶನ

ಉಡುಪಿ :ಕೃಷ್ಣಮಠದ ರಾಜಾಂಗಣದಲ್ಲಿ ಕೆಲವು ದಿನಗಳಿಂಸ " ವಿಶ್ವಾರ್ಪಣಂ " ಸಾಂಸ್ಕೃತಿಕ ,ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ.ಕಾರ್ಯಕ್ರಮದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮಗಳೂ ನಡೆಯುತ್ತಿವೆ.ಇವತ್ತು ಅಪರೂಪದ ಕಲೆ ಯಕ್ಷಗಾನ ಬೊಂಬೆಯಾಟವು ರಾಜಾಂಗಣದಲ್ಲಿ ಕಲಾಸಕ್ತರನ್ನು ರಂಜಿಸಿತು.

ಗಣೇಶ ಯಕ್ಷಗಾಗ ಗೊಂಬೆಯಾಟದವರು ಲಂಕಾದಹನ‌ ಪ್ರಸಂಗವನ್ನು ಪ್ರದರ್ಶಿಸಿದ್ದು ಕಲಾಸಕ್ತರ ಆಸಕ್ತಿ ಕೆರಳುವಂತೆ ಮಾಡಿತು.ಪ್ರೇಕ್ಷಕರು ವೇದಿಕೆಯಲ್ಲಿ ಗೊಂಬೆಗಳ ಪ್ರದರ್ಶನ ಕಂಡರೂ ,ಅದರ ಹಿಂದಿರುವ ಸೂತ್ರದಾರರ ಶ್ರಮವು ಯಾರಿಗೂ ಕಾಣಿಸದು.ಸ್ವತಃ ಪರ್ಯಾಯ ಶ್ರೀಗಳು ಕೆಲಹೊತ್ತು ಗೊಂಬೆಯಾಟ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Edited By : Shivu K
Kshetra Samachara

Kshetra Samachara

24/12/2021 05:14 pm

Cinque Terre

12.21 K

Cinque Terre

1