ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಯು.ಬಿ ಶೆಟ್ಟಿ ಶಿಕ್ಷಣ ಸಂಸ್ಥೆಗಳ ನೂತನ ಶಾಲಾ ವಾಹನಗಳಿಗೆ ಎಸ್ಪಿ ವಿಷ್ಣುವರ್ಧನ್ ಚಾಲನೆ

ಬೈಂದೂರು : ಯು.ಬಿ ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ನೂತನ ಶಾಲಾ ವಾಹನಗಳಿಗೆ ಚಾಲನೆ ನೀಡುವ ಸಮಾರಂಭ ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ನಡೆಯಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಶಾಲಾ ವಾಹನಗಳಿಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ.ಆದರೆ ಮೂಲ ಸೌಕರ್ಯದ ಕೊರತೆಗಳಿರಬಹುದು.ವಿದ್ಯಾರ್ಥಿಗಳು ಪಾಲಕರ ಕನಸನ್ನು ಸಾಕಾರಗೊಳಿಸುವ ಜವಾಬ್ದಾರಿಯ ಜೊತೆಗೆ ವಿದ್ಯೆ ಅತ್ಯಮೂಲ್ಯ ಆಸ್ತಿ.ಸಮರ್ಪಕ ಗುರಿ ಇದ್ದಾಗ ಬದುಕಿನಲ್ಲಿ ಯಶಸ್ಸು ಸಾದ್ಯ.ಹೀಗಾಗಿ ಶೈಕ್ಷಣಿಕ ಬದುಕನ್ನು ವಿದ್ಯಾರ್ಥಿಗಳು ತಪಸ್ಸಿನಂತೆ ಸಾಧಿಸಬೇಕು ಎಂದರು.

ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕ್ ಎಂ.ಡಿ ಮಹಾಬಲೇಶ್ವರ ಎಂ.ಎಸ್. ಉದ್ಘಾಟಿಸಿದರು.

ಯು.ಬಿ ಶೆಟ್ಟಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಬಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಸಹಾಯಕ ಪ್ರಬಂಧಕ ರಾಜಗೋಪಾಲ ಬಿ,ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ ಮುಂದಿನಮನಿ,ಟ್ರಷ್ಟಿಗಳಾದ ರಂಜನಾ ಯು.ಬಿ.ಶೆಟ್ಟಿ, ಶುಭಶ್ರೀ,ಪುನೀತ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಯಶಶ್ರೀ ಶೆಟ್ಟಿ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

24/12/2021 03:38 pm

Cinque Terre

4.46 K

Cinque Terre

0

ಸಂಬಂಧಿತ ಸುದ್ದಿ