ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾಗಿ ಡಾ: ರಾಜ್‌ಶೇಖರ್ ಕೋಟ್ಯಾನ್ ಪುನರಾಯ್ಕೆ

ಮುಲ್ಕಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಮುಂದಿನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿಯ ಆಯ್ಕೆ ನಡೆಯಿತು

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ನೂತನ ಅಧ್ಯಕ್ಷರಾಗಿ ನಟ, ನಿರ್ದೇಶಕ, ನಿರ್ಮಾಪಕ, ಉದ್ಯಮಿ ಡಾ| ರಾಜ್‌ಶೇಖರ್ ಕೋಟ್ಯಾನ್‌ರವರು ಸರ್ವಾನುಮತದಿಂದ ಆಯ್ಕೆಯಾದರು.

ಉಪಾಧ್ಯಕ್ಷರುಗಳಾಗಿ ಪಿತಾಂಬರ ಹೆರಾಜೆ ಬೆಳ್ತಂಗಡಿ, ಸೂರ್ಯಕಾಂತ್ ಜಯ ಸುವರ್ಣ, ಮುಂಬಯಿ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಕುಮಾರ್ ಕುಬೆವೂರು, ಜೊತೆ ಕಾರ್ಯದರ್ಶಿಗಳಾಗಿ ಗಂಗಾಧರ ಪೂಜಾರಿ, ಬಾಳ, ಚೇಳಾಯರು, ಗಣೇಶ್ ಎಲ್. ಪೂಜಾರಿ, ಬೈಂದೂರು. ಕೋಶಾಧಿಕಾರಿಯಾಗಿ ಪ್ರಭಾಕರ್ ಬಂಗೇರ, ಕಾರ್ಕಳ, ಜೊತೆ ಕೋಶಾಧಿಕಾರಿಯಾಗಿ ಶಿವಾಜಿ ಸುವರ್ಣ, ಬೆಳ್ವೆ, ಸಲಹೆಗಾರರಾಗಿ ಮೋಹನ್‌ದಾಸ್ ಪಾವೂರು ಭಂಡಾರಮನೆ ಹಾಗೂ ಸಮಿತಿ ಸದಸ್ಯರುಗಳನ್ನು ಆಯ್ಕೆಮಾಡಲಾಯಿತು.

Edited By : PublicNext Desk
Kshetra Samachara

Kshetra Samachara

21/12/2021 03:25 pm

Cinque Terre

2.61 K

Cinque Terre

1